Ts ads

13 ಜುಲೈ, 2022

ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗೆ ತಯಾರಿ ಹೇಗೆ ನಡೆಸಬೇಕು?

ಪರೀಕ್ಷೆ ಮೂರು ಹಂತಗಳಲ್ಲಿ ನಡೆಯುತ್ತದೆ. ಮೂರು ಹಂತಗಳಲ್ಲಿ ಕಠಿಣ ಪರಿಶ್ರಮ ಅಗತ್ಯ. ತಾಸುಗಟ್ಟಲೆ ತಯಾರಿ ಮಾಡಬೇಕು. ಬೇಕಾದಷ್ಟು ವಿಶೇಷ ತರಬೇತಿ ಪಡೆಯಬೇಕು ಅಂತರ್ಜಾಲದಲ್ಲಿ ಲಭ್ಯವಿರುವ ಡೆಮೊ ವಿಡಿಯೋ ನೋಡಿ ಆಲಿಸಬಹುದು. ಪರೀಕ್ಷಾ ವ್ಯವಸ್ಥೆಯಲ್ಲಿ ಬಾಯಿಪಾಠಕ್ಕೆ ಜಾಸ್ತಿಯೇ ಮಹತ್ವ ಇರುವುದರಿಂದ ಅದರ ಬಗ್ಗೆ ಗಮನ ಕೊಡಬೇಕಾಗುತ್ತದೆ. 


ಹಿಂದಿನ ಪ್ರಶ್ನೆ ಪತ್ರಿಕೆಗಳ ಸಿಲೆಬಸ್ ನ್ನು ಸಮರ್ಥವಾಗಿ ಫಿಲ್ಟರ್ ಮಾಡಿದರೆ ಸುಲಭವಾಗುತ್ತದೆ. ಓದುವಾಗ ನೆನಪಿನಲ್ಲಿ ಇಟ್ಟು ಕೊಳ್ಳುವುದು ಅದನ್ನು ಮನನ ಮಾಡಿಕೊಳ್ಳಬೇಕು.  ಶೊರ್ಟನೊಟ ಮಾಡಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ ಘಟ್ಟವಾಗಿದೆ. ಅರ್ಥ ಮಾಡಿಕೊಂಡು ಓದುದು ಒಳ್ಳೆಯದು, ಆದರೆ ಅನಿವಾರ್ಯವಾಗಿದೆ .  ದುಬಾರಿ ಕೋಚಿಂಗ ಕ್ಲಾಸ್ ಮಾಡಿ ಫಲ ನೀಡಿದೆ ಇರಬಹುದು ಅದಕ್ಕೆ ಪ್ರತಿಯಾಗಿ ನಮ್ಮ ವೈಯಕ್ತಿಕ ಪರಿಶ್ರಮ ಬೇಕಾಗುತ್ತದೆ. 

ಹೊಸದಾಗಿ ಅಧ್ಯಯನ ಪ್ರಾರಂಭಿಸುವವರು ಹೀಗೆ ಮಾಡಬಹುದು: 

ನನ್ನ ಪ್ರಕಾರ,

1. ಮೊದಲು ಪರೀಕ್ಷೆಯ ಪಠ್ಯಕ್ರಮವನ್ನು ಸಂಗ್ರಹಿಸಬೇಕು.

2. ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಬೇಕು.

3. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು, ಮಾದರಿ ಪ್ರಶ್ನೆಗಳು ಮತ್ತು ಗುರುತು ಮಾಡುವ ವ್ಯವಸ್ಥೆಗಳನ್ನು ಸಂಗ್ರಹಿಸಬೇಕು.

4. ಪರೀಕ್ಷೆಗೆ ಒಂದು ತಿಂಗಳ ಮೊದಲು ಎಲ್ಲಾ ಅಧ್ಯಯನ ಸಾಮಗ್ರಿಗಳನ್ನು ಅಧ್ಯಯನ ಮಾಡಬೇಕು.

5. ಎಲ್ಲಾ ಅಪರಿಚಿತ ಪ್ರಶ್ನೆಗಳನ್ನು ಪರಿಹರಿಸಲು ಶಿಕ್ಷಕರು, ಸ್ನೇಹಿತರ ಸಹಾಯವನ್ನು ತೆಗೆದುಕೊಳ್ಳಬೇಕು.

6. ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆಯ ಮೊದಲು ಕಳೆದ ತಿಂಗಳು ನಿಗದಿತ ಸಮಯದೊಳಗೆ ಪರಿಹರಿಸಬೇಕು.

7. ಕೆಲವು ಆಧ್ಯಾತ್ಮಿಕತೆ, ವಿನಮ್ರ ವರ್ತನೆ ಮತ್ತು ಉದಾರ ವ್ಯಕ್ತಿತ್ವವನ್ನು ಸಿದ್ಧತೆಗಳ ಸಮಯದಲ್ಲಿ ಬೆಳೆಸಿಕೊಳ್ಳಬೇಕು.

8. ಯಶಸ್ಸು ಮತ್ತು ವೈಫಲ್ಯ ಎರಡನ್ನೂ ಒಂದೇ ರೀತಿಯಲ್ಲಿ ಆಚರಿಸಲು ಸಿದ್ಧರಾಗಿರಬೇಕು.


0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ