Ts ads

28 ಜುಲೈ, 2022

KCET 2022 ಫಲಿತಾಂಶ ಚೆಕ್‌ ಮಾಡಲು ರೋಲ್ ನಂಬರ್ ಸಿಗ್ತಿಲ್ವಾ? ಈ ವಿಧಾನ ಫಾಲೋ ಮಾಡಿ



ಹೈಲೈಟ್ಸ್‌:

  • ಕೆಸಿಇಟಿ ರೋಲ್ ನಂಬರ್ ಚೆಕ್‌ ಹೇಗೆ?
  • ರೋಲ್‌ ನಂಬರ್ ಇಲ್ಲದೇ ರಿಸಲ್ಟ್‌ ಚೆಕ್‌ ಮಾಡಬಹುದಾ?
  • ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
KCET 2022 Result : ಇಂಜಿನಿಯರಿಂಗ್, ಕೃಷಿ ವಿಜ್ಞಾನ ಮುಂತಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜೂನ್‌ 16, 17, 18 ರಂದು ಕಾಮನ್ ಎಂಟ್ರ್ಯಾನ್ಸ್‌ ಟೆಸ್ಟ್‌ ಅನ್ನು ನಡೆಸಿತ್ತು. ಈ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲು ಇದೀಗ ಅಧಿಕೃತ ದಿನಾಂಕ ಪ್ರಕಟಿಸಲಾಗಿದೆ. ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವತ್ಥನಾರಾಯಣ ರವರು ತಿಳಿಸಿರುವ ಪ್ರಕಾರ ಜುಲೈ 30 ರಂದು ಪರೀಕ್ಷೆ ರಿಸಲ್ಟ್‌ ಬಿಡುಗಡೆ ಆಗಲಿದೆ. ಯಾವ ಸಮಯಕ್ಕೆ ರಿಸಲ್ಟ್‌ ಪ್ರಕಟಿಸಲಾಗುತ್ತದೆ ಎಂದು ಮಾತ್ರ ತಿಳಿಸಲಾಗಿಲ್ಲ.

ಅಂದಹಾಗೆ ಕೆಸಿಇಟಿ ಪರೀಕ್ಷೆ ಬರೆದ ಕೆಲವು ಅಭ್ಯರ್ಥಿಗಳು ತಮ್ಮ ರಿಸಲ್ಟ್‌ ಚೆಕ್‌ ಮಾಡಲು ರೋಲ್‌ ನಂಬರ್ ಅತ್ಯಗತ್ಯ. ಆದರೆ ಕೆಲವರು ತಮ್ಮ ಅಡ್ಮಿಟ್‌ ಕಾರ್ಡ್‌ ಅನ್ನು ಕಳೆದುಕೊಂಡಿದ್ದು, ರೋಲ್‌ ನಂಬರ್ ಗೊತ್ತಿಲ್ಲ. ಅದನ್ನು ತಿಳಿಯುವುದು ಹೇಗೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

ಕೆಸಿಇಟಿ ರೋಲ್‌ ನಂಬರ್ ತಿಳಿಯುವುದು ಹೇಗೆ?
- ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್‌ ಇಮೇಲ್‌ ನಲ್ಲಿ ಅಪ್ಲಿಕೇಶನ್‌ ನಂಬರ್‌ ಅನ್ನು ಅಥವಾ ಕೆಸಿಇಟಿ ರಿಜಿಸ್ಟ್ರೇಷನ್‌ ವೇಳೆ ನೀಡಲಾದ ಇ-ಮೇಲ್‌ ಗೆ ಭೇಟಿ ನೀಡಿ, ಒಮ್ಮೆ ಅಲ್ಲಿ ಅಪ್ಲಿಕೇಶನ್‌ ನಂಬರ್ ಅನ್ನು ಚೆಕ್‌ ಮಾಡಬಹುದು.
- ಒಂದು ವೇಳೆ ಇಮೇಲ್‌ ನಲ್ಲಿ ಸಿಗದಿದ್ದಲ್ಲಿ ಅಪ್ಲಿಕೇಶನ್‌ ನಂಬರ್‌ ಅನ್ನು ಅರ್ಜಿ ಶುಲ್ಕ ಪಾವತಿಸಿದ ಚಲನ್‌ ಅನ್ನು ಚೆಕ್‌ ಮಾಡಿ. ಇದರಲ್ಲಿ ನೀಡಲಾಗಿರುತ್ತದೆ.

- ಅಭ್ಯರ್ಥಿಗಳು ಅರ್ಜಿ ಶುಲ್ಕದ ಕ್ಯಾಂಡಿಡೇಟ್ ಕಾಪಿಯನ್ನು ಹೊಂದಿರುತ್ತೀರಿ, ಅದರಲ್ಲಿ ಅಪ್ಲಿಕೇಶನ್‌ ನಂಬರ್ ಚೆಕ್‌ ಮಾಡಬಹುದು.
- ಉದಾಹರಣೆಗೆ KEA Ref Number 114455200 ಎಂದು ನೀಡಲಾಗಿರುತ್ತದೆ. ಅಲ್ಲಿ ಪಡೆಯಬಹುದು.

- ಅಭ್ಯರ್ಥಿಗಳು ಒಮ್ಮೆ ತಮ್ಮ ರಿಜಿಸ್ಟರ್ ಮೊಬೈಲ್‌ ನಂಬರ್‌ಗೆ ಬಂದಿರುವ ಇಂಬಾಕ್ಸ್‌ ನಲ್ಲಿನ ಮೆಸೇಜ್‌ಗಳನ್ನು ಪರಿಶೀಲಿಸಿ. ಸಿಇಟಿ'ಗೆ ರಿಜಿಸ್ಟ್ರೇಷನ್‌ ಪಡೆದ ಸಂದರ್ಭದಲ್ಲಿ ಮೆಸೇಜ್‌ ಬಂದಿದ್ದು, ಅದು ಇದ್ದಲ್ಲಿ ಅಪ್ಲಿಕೇಶನ್‌ ನಂಬರ್ ಸಿಗಬಹುದು.
- ಅಪ್ಲಿಕೇಶನ್‌ ನಂಬರ್‌ನೊಂದಿಗೆ ಅಭ್ಯರ್ಥಿಗಳು ವೆಬ್‌ಸೈಟ್‌ https://cetonline.karnataka.gov.in/onlineappugcethallticket2022/forms/hallticket.aspx ಗೆ ಭೇಟಿ ನೀಡಿ.

- ಓಪನ್ ಆದ ಪೇಜ್‌ನಲ್ಲಿ ಲಾಗಿನ್‌ ಐಡಿ / ರಿಜಿಸ್ಟರ್‌ ಐಡಿ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ ಸಬ್‌ಮಿಟ್‌ ಮಾಡಿ.
- ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಇಲ್ಲಿ ಸಹ ಹಾಲ್ ಟಿಕೆಟ್‌ನಲ್ಲಿ ರೋಲ್‌ ನಂಬರ್‌ ಸಿಗುತ್ತದೆ.


ಒಂದು ವೇಳೆ ಮೇಲಿನ ಯಾವುದೇ ಮಾರ್ಗದಲ್ಲಿ ಅಭ್ಯರ್ಥಿಗಳು ಅಪ್ಲಿಕೇಶನ್‌ ನಂಬರ್‌ / ರಿಜಿಸ್ಟರ್‌ ನಂಬರ್‌ ಅನ್ನು ಪಡೆಯಲು ಸಾಧ್ಯವಾಗದಿದ್ದಲ್ಲಿ ಈ ಕೆಳಗಿನ ಇ-ಮೇಲ್‌, ಸಂಪರ್ಕ ಸಂಖ್ಯೆಗಳನ್ನು ಬಳಸಿ ಪಡೆಯಿರಿ.

ಟೆಲಿಫೋನ್ : 080-23460460
ವಾಟ್ಸಾಪ್ ನಂಬರ್ : 9741388123
ಇ-ಮೇಲ್ ವಿಳಾಸ : keauthority-ka@nic.in

ಈ ಮೇಲಿನ ಕೆಇಎ ಎಕ್ಸಿಕ್ಯೂಟಿವ್ ಡೈರೆಕ್ಟರ್‌ ರವರ ಸಂಪರ್ಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಅಪ್ಲಿಕೇಶನ್‌ ನಂಬರ್ / ರೋಲ್‌ ನಂಬರ್ ಪಡೆಯಬಹುದು.
ಸಿಇಟಿ 2022 ರಿಸಲ್ಟ್‌ ಚೆಕ್‌ ಮಾಡುವುದು ಹೇಗೆ?
- ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.

- ಓಪನ್ ಆದ ಪೇಜ್‌ನಲ್ಲಿ 'KCET 2022 Result' ಗೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
- ಕೆಇಎ'ಯ ಹೊಸ ಪೇಜ್‌ ಓಪನ್ ಆಗುತ್ತದೆ.

- ಈ ಪೇಜ್‌ನಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ, 'Submit' ಎಂಬಲ್ಲಿ ಕ್ಲಿಕ್ ಮಾಡಿ.
- ಫಲಿತಾಂಶ ಪ್ರದರ್ಶನ ಆಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ