Ts ads

06 ಜುಲೈ, 2022

17 ಸುಸಜ್ಜಿತ ರೈಲ್ವೆ ನಿಲ್ದಾಣಗಳ ಪೈಕಿ ಬೆಳಗಾವಿಯು ಒಂದು: ನೈಋತ್ಯ ರೈಲ್ವೆಯ ಸುಧಾರಿತ ವೀಡಿಯೊ ಕಣ್ಗಾವಲು ವ್ಯವಸ್ಥೆ ಅಳವಡಿಸಿಸಲಾಗುವುದು.

ಸುಧಾರಿತ ತಂತ್ರಜ್ಞಾನದೊಂದಿಗೆ ವೀಡಿಯೊ ಕಣ್ಗಾವಲು ವ್ಯವಸ್ಥೆಯನ್ನು ಹೊಂದಲಿರುವ 17 ನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ ಬೆಳಗಾವಿಯು ಒಂದಾಗಿದೆ. ನಿರ್ಭಯಾ ನಿಧಿಯ ಅಡಿಯಲ್ಲಿ  ರಿಯಲ್ ಟೈಮ್ ವಿಡಿಯೋ ಸರ್ವೆಲೈನ್ಸ್ ಯೋಜನೆಯಿಂದ ಕಾರ್ಯಗತಗೊಳ್ಳಲಿದೆ.  ಭಾರತೀಯ ರೈಲ್ವೆಯಾದ್ಯಂತ 756 ರೈಲ್ವೆ ನಿಲ್ದಾಣಗಳಲ್ಲಿ ನಿರ್ಭಯಾ ನಿಧಿಯ ಅಡಿಯಲ್ಲಿ ವೀಡಿಯೊ ಕಣ್ಗಾವಲು ವ್ಯವಸ್ಥೆ (ವಿಎಸ್‌ಎಸ್) ಯೋಜನೆಯನ್ನು (ಸಿಸಿಟಿವಿ ಕ್ಯಾಮೆರಾಗಳ ನೆಟ್‌ವರ್ಕ್ ಗಳ) ಜಾರಿಗೊಳಿಸಲಿರುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ.

 ಈ ರಿಯಲ್ ಟೈಮ್ ವಿಡಿಯೋ ಸರ್ವೆಲೈನ್ಸ್ ವ್ಯವಸ್ಥೆಯು ಇಂಟರ್ನೆಟ್ ಪ್ರೋಟೋಕಾಲ್ ಆಧಾರಿತವಾಗಿರುತ್ತದೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಂತರ್ಜಾಲ ವ್ಯವಸ್ಥೆ  ಹೊಂದಿರುತ್ತದೆ. ಈ ಸಿಸಿಟಿವಿಗಳನ್ನು ಆಪ್ಟಿಕಲ್ ಫೈಬರ್ ಕೇಬಲ್‌ನಲ್ಲಿ ನೆಟ್‌ವರ್ಕ್ ಮಾಡಲಾಗುತ್ತಿದೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ವೀಡಿಯೊ ಫೀಡ್ ಅನ್ನು ಸ್ಥಳೀಯ ರೈಲ್ವೆ ಪೊಲೀಸ್ ಫೋರ್ಸ್(ಆರ್.ಪಿ.ಎಫ್)ದಲ್ಲಿ ಮಾತ್ರವಲ್ಲದೆ ವಿಭಾಗೀಯ ಮತ್ತು ವಲಯ ಮಟ್ಟದಲ್ಲಿ ಕೇಂದ್ರೀಕೃತ ಸಿಸಿಟಿವಿ ನಿಯಂತ್ರಣ ಕೊಠಡಿಯಲ್ಲಿ ಪ್ರದರ್ಶಿಸಲಾಗುತ್ತದೆ. ರೈಲ್ವೆ ಆವರಣದಲ್ಲಿ ವರ್ಧಿತ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾಗಳು ಮತ್ತು ವೀಡಿಯೊ ಫೀಡ್‌ಗಳನ್ನು ಈ 3 ಹಂತಗಳಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. 
ಈ ವ್ಯವಸ್ಥೆಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಕ್ರಿಯಗೊಳಿಸಿದ ವೀಡಿಯೊ ಅನಾಲಿಟಿಕ್ಸ್ ಸಾಫ್ಟ್‌ವೇರ್ ಮತ್ತು ಮುಖ ಗುರುತಿಸುವಿಕೆ ಸಾಫ್ಟ್‌ವೇರ್‌ನೊಂದಿಗೆ ಬರುತ್ತದೆ
ಇದು ತಿಳಿದಿರುವ ಅಪರಾಧಿಗಳು ನಿಲ್ದಾಣದ ಆವರಣಕ್ಕೆ ಪ್ರವೇಶಿಸಿದಾಗ ಎಚ್ಚರಿಕೆ ಗಂಟೆಯನ್ನು ಬಾರಿಸುತ್ತದೆ ಮತ್ತು ಪತ್ತೆಹಚ್ಚಲು ಸಹಾಯ ಮಾಡುತ್ತದೆ. 
ಕ್ಯಾಮೆರಾಗಳು, ಸರ್ವರ್, ಯುಪಿಎಸ್ ಮತ್ತು ಸ್ವಿಚ್‌ಗಳ ಮೇಲ್ವಿಚಾರಣೆಗಾಗಿ ನೆಟ್‌ವರ್ಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಎನ್‌ಎಂಎಸ್)ಅನ್ನು ಸಹ ಒದಗಿಸಲಾಗಿದೆ. ಇದರಿಂದಾಗಿ ಅಧಿಕೃತ ಸಿಬ್ಬಂದಿಯಿಂದ ಯಾವುದೇ ವೆಬ್ ಬ್ರೌಸರ್‌ನಿಂದ ವೀಕ್ಷಿಸಬಹುದು.


ರೈಲ್ವೆ ಆವರಣದ ಗರಿಷ್ಠ ವ್ಯಾಪ್ತಿಯಲ್ಲಿ ಖಚಿತಪಡಿಸಿಕೊಳ್ಳಲು 4 ರೀತಿಯ ಇಂಟರ್ನೆಟ್ ಪ್ರೊಟೊಕಾಲ್ ಕ್ಯಾಮೆರಾಗಳನ್ನು ಅಳವಡಿಸಲಾಗುವುದು, RDSO ವರ್ಷನ್6.0 ರ ಪ್ರಕಾರ ವೀಡಿಯೊ ಅನಾಲಿಟಿಕ್ ಮತ್ತು ಫೇಸ್ ರೆಕಗ್ನಿಷನ್‌ನಂತಹ ಸಾಫ್ಟ್‌ವೇರ್ ಆಧಾರಿತ ಅಪ್ಲಿಕೇಶನ್ ಅಳವಡಿಸಲಾಗಿದೆ. ಅಹಿತಕರ/ಅನಿರೀಕ್ಷಿತ ಘಟನೆಗಳು ಮತ್ತು ಸಂದರ್ಭಗಳಲ್ಲಿ  ಘಟನೆಗಳಿಗೆ ತ್ವರಿತ ಪ್ರತಿಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಪರಿಹಾರಗಳನ್ನು ಒದಗಿಸುವಲ್ಲಿ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.


ಮೊದಲನೇ ಹಂತದಲ್ಲಿ ರಿಯಲ್ ಟೈಮ್ ವಿಡಿಯೋ ಸರ್ವೆಲೈನ್ಸ್ ಯೋಜನೆಯ ಅನುಷ್ಠಾನಕ್ಕಾಗಿ ನೈಋತ್ಯ ರೈಲ್ವೆ ಅಡಿಯಲ್ಲಿ ಕೆಳಗಿನ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ.

ಬೆಳಗಾವಿ
ಬೀರೂರು
ದಾವಣಗೆರೆ
ಹಾಸನ
ಶಿವಮೊಗ್ಗ ಟೌನ್
ಬಾಣಸವಾಡಿ
ಬೆಂಗಳೂರು ಕ್ಯಾಂಟ್
ಬಂಗಾರಪೇಟೆ
ಕೆಂಗೇರಿ
ಕೃಷ್ಣರಾಜಪುರಂ
ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯ
ಬಳ್ಳಾರಿ
ವಿಜಯಪುರ
ಗದಗ
ಹೊಸಪೇಟೆ
ಹುಬ್ಬಳ್ಳಿ
ವಾಸ್ಕೋ-ಡಿ-ಗಾಮಾ.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ