Ts ads

10 ಜುಲೈ, 2022

ಗಂಟೆಗೆ ಅರವತ್ತು ನಿಮಿಷಗಳನ್ನು ಯಾರು ನಿರ್ಧರಿಸಿದರು, ಮತ್ತು ಹೇಗೆ ನಿರ್ಧರಿಸಿದರು ಎಂಬುದನ್ನು ತಿಳಿಯಿರಿ

ಎರಡು ಅಥವಾ ನಾಲ್ಕು ಹಣ್ಣುಗಳನ್ನು ಮೂವರಿಗೆ ಹಂಚುವುದು ಕಷ್ಟ. ಮೂರು ಅಥವಾ ಐದು ಹಣ್ಣುಗಳನ್ನು ಇಬ್ಬರಿಗೆ ಹಂಚುವುದು ಕಷ್ಟ. ಐದು ಹಣ್ಣುಗಳನ್ನು ಇಬ್ಬರಿಗೆ ಅಥವಾ ಮೂವರಿಗೆ ಅಥವಾ ನಾಲ್ವರಿಗೆ ಹಂಚುವುದು ಕಷ್ಟ.

ಇಷ್ಟು ಪೀಠಿಕೆ ಕೊಟ್ಟ ಉದ್ದೇಶ ಇಷ್ಟೇ: ಯಾವ ಸಂಖ್ಯೆಯನ್ನು ಸುಲಭವಾಗಿ ಅನೇಕ ಭಾಗಗಳನ್ನಾಗಿ ಮಾಡಲು ಸಾಧ್ಯವಿಲ್ಲವೋ ಅದರ ಬದಲು ಅನೇಕ ಭಾಗಗಳನ್ನಾಗಿ ಮಾಡಲು ಸಾಧ್ಯವಿರುವ ಸಂಖ್ಯೆಯನ್ನು ಬಳಸಿ ಲೆಕ್ಕಾಚಾರ ಮಾಡುವುದು ಅನೇಕ ರೀತಿಯಲ್ಲಿ ಅನುಕೂಲಕರ.

ಅಂತಹ ಸಂಖ್ಯೆಗಳಲ್ಲಿ 60 ಒಂದು.

60 ಅನ್ನು ಸುಲಭವಾಗಿ 2, 3, 4, 5, 6, 10, 12, 15, 20, 30 ಭಾಗಗಳನ್ನಾಗಿ ಮಾಡಬಹುದು. ಈ ಕಾರಣಕ್ಕಾಗಿಯೋ ಏನೋ 4000 ವರ್‍ಷಗಳ ಹಿಂದೆ ಸುಮೇರಿಯನ್ನರು ಸಂಖ್ಯೆ 60 ಅನ್ನು ಹೆಚ್ಚು ಉಪಯೋಗಿಸುತ್ತಿದ್ದರು.

ಅವರಿಂದ ಕಲಿತು ಬ್ಯಾಬಿಲೋನ್ ಜನರೂ ಖಗೋಳ ಶಾಸ್ತ್ರದ ಲೆಕ್ಕಗಳನ್ನು 60ರ ಆಧಾರದ ಮೇಲೆ ಮಾಡುತ್ತಿದ್ದರು.

ಇದೇ ಪದ್ಧತಿಯನ್ನು ಗ್ರೀಕರೂ ಮುಂದುವರೆಸಿದರು.

ಈಗ ಹೆಚ್ಚಿನ ಕಡೆ ದಶಮಾನ ಪದ್ಧತಿ ಬಳಕೆಯಲ್ಲಿದ್ದರೂ 60ರ ಆಧಾರದ ಲೆಕ್ಕಾಚಾರಗಳನ್ನು ಕೋನಗಳು, ರೇಖಾಂಶಗಳು ಮತ್ತು ಸಮಯದ ಎಣಿಕೆಗೆ ಈಗಲೂ ಬಳಸುತ್ತೇವೆ. ಹಾಗಾಗಿ ಒಂದು ಗಂಟೆಯಲ್ಲಿ 60 ನಿಮಿಷ ಹಾಗೂ ಒಂದು ನಿಮಿಷದಲ್ಲಿ 60 ಸೆಕೆಂಡ್‌ಗಳಿವೆ.

ಅಲ್ಲದೆ ಒಂದು ಡಿಗ್ರಿ ಕೋನದಲ್ಲಿ 60 ನಿಮಿಷ ಹಾಗೂ ಒಂದು ನಿಮಿಷದಲ್ಲಿ 60 ಸೆಕೆಂಡ್‌ಗಳಿವೆ.

ಇನ್ನೊಂದು ಸ್ವಾರಸ್ಯಕರ ವಿಷಯ ಏನು ಗೊತ್ತೇ! ಮಿನಿಟ್ ಎಂದರೆ ಸಣ್ಣ ಭಾಗ.

1 ಗಂಟೆ ಅಥವಾ ಡಿಗ್ರಿಯನ್ನು 60 ಫಸ್ಟ್ ಮಿನಿಟ್‌‌ ಗಳಾಗಿ ಭಾಗಮಾಡಿ

ಒಂದೊಂದು ಭಾಗವನ್ನೂ ಮತ್ತೆ 60 ಸೆಕೆಂಡ್ ಮಿನಿಟ್‌ ಗಳಾಗಿ ಭಾಗ ಮಾಡಿದರು.

ಉದ್ದುದ್ದದ ಹೆಸರುಗಳು ಬರಬರುತ್ತಾ ಮೊಟಕಾದವು.

ಫಸ್ಟ್ ಮಿನಿಟ್ ಹೆಸರು ಮಿನಿಟ್ ಎಂದೂ

ಸೆಕೆಂಡ್ ಮಿನಿಟ್ ಹೆಸರು ಸೆಕೆಂಡ್ ಎಂದೂ ಪ್ರಚಲಿತವಾದವು. 

ಇದೆಲ್ಲ ಲೆಕ್ಕಾಚಾರ ಒಂದು ಕಡೆ ಇದ್ರು ನಮ್ಮ ಸಂಸ್ಕೃತ ಭಾಷೆಗೆ ಪೂರಕವಾದ ಮತ್ತೊಂದು ವಿಚಾರವು ನಮಗೆ ಕಾಣುಸಿಗುತ್ತದೆ. ಪ್ರಾಚೀನ ಗ್ರಂಥಗಳಲ್ಲಿ, ಶಾಸ್ತ್ರಗಳಲ್ಲಿ ಬೀಜ ಗಣಿತ, ಅಂಕ ಗಣಿತ, ಖಗೋಳ ಶಾಸ್ತ್ರ.... ಹೀಗೆ ದೊಡ್ಡ ಜ್ಞಾನ ಭಂಡಾರವೇ ಸಂಸ್ಕೃತ ಭಾಷೆಯಲ್ಲಿ ಇರುವಾಗ ನಾವು ಯಾಕಾಗಿ ನಮ್ಮ ಹಿರಿಯರು ಕಂಡುಕೊಂಡ ವಿಷಯಗಳನ್ನು ವಿದೇಶಿಯರ ಕೊಡುಗೆ ಎಂದು ಹೇಳುತ್ತಿದ್ದೆವೋ ಅರ್ಥವಾಗದು, ನೋವಾಗುತ್ತದೆ. ಗಂಟೆ, ನಿಮಿಷ ಇದೆಲ್ಲ ನಮ್ಮ ಹಿರಿಯರೇ ಕಂಡುಕೊಡಿದ್ದು. 

ಆರ್ಯಭಟರ ಗಣಿತ, ಭಾಸ್ಕರಾಚಾರ್ಯ, ಲೀಲಾವತಿ ಗಣಿತದಲ್ಲಿ ಈ ಎಲ್ಲ ಸಂಗತಿಗಳು ಇವೆ. ಕ್ಷಣ ಎಂಬುದು ಸೆಕೆಂಡ್ ಗೆ ಸಮಾನ. Geometry ಎಂಬ ಇಂಗ್ಲಿಷ್ ಶಬ್ದವೇ ಸಂಸ್ಕೃತದ ಜಾಮಿತಿ ಯಿಂದ ಬಂದಿದೆ. 

ಬೀಜಗಣಿತವೇ ಇಂದಿನ Algebra. ಸಂಸ್ಕೃತದ ಬೀಜಗಣಿತದಲ್ಲಿ ಸಂಸ್ಕೃತ ಅಕ್ಷರಗಳನ್ನು ಉಪಯೋಗಿಸುತ್ತಿದ್ದರು, Algebraದಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಉಪಯೋಗಿಸುತ್ತಾರೆ. ಆದ್ದರಿಂದ ಗಂಟೆ, ನಿಮಿಷ, ಕ್ಷಣ, ಘಟಿ (ಕನ್ನಡದಲ್ಲಿ ಗಳಿಗೆ ) ಎಲ್ಲವು ನಮ್ಮವರದೇ ಕೊಡುಗೆ. ಅದರ ಬಗ್ಗೆ ಹೆಮ್ಮೆ ಪಡೋಣ. 


0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ