Ts ads

19 ಜುಲೈ, 2022

ಬಾಗಲಕೋಟೆ ಜಿಲ್ಲೆಯಲ್ಲಿ ಸಂಛಲನ ಮೂಡಿಸುತ್ತಿರುವ ಬಂಡಾಯ ಯಾತ್ರೆ : ಜನಜಾಗೃತಿ ಅಭಿಯಾನ.

ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆ ಕುಸಿಯುತ್ತಿದೆ ಹಾಗೂ ಚುನಾವಣೆಯ ವ್ಯವಸ್ಥೆ ಹದಗೆಟ್ಟಿದೆ. ಚುನಾವಣೆಯಲ್ಲಿ ಪ್ರಜ್ಞಾವಂತರು, ಸಾಮಾಜಿಕ ಕಳಕಳಿ ಹೊಂದಿರುವ ಸಮರ್ಥ ವ್ಯಕ್ತಿಗಳು ಚುನಾವಣಾ ಸಕ್ತಿಯ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆ. ಅಲ್ಲದೇ ಇಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಆಯ್ಕೆಯಾಗುವುದು ಕಷ್ಟವಾಗಿದೆ. ಇಡಿ ಚುನಾವಣಾ ವ್ಯವಸ್ಥೆಯನ್ನು ಬಂಡವಾಳಶಾಹಿಗಳು ಹದಗೆಡಿಸಿದ್ದಾರೆ. ಮತದಾರರಿಗೆ ಹಣ, ಹೆಂಡ ಮತ್ತು ಖಂಡದ ರುಚಿ ತೋರಿಸಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಗುಲಾಮರಾಗಿ ಕೆಲಸ ಮಾಡುವ ವ್ಯಕ್ತಿಗಳು ಗೆಲ್ಲುವಂತೆ ಚುನಾವಣೆ ವ್ಯವಸ್ಥೆಯ ನಿರ್ಮಾಣವನ್ನು ಈ ಬಂಡವಾಳಶಾಹಿಗಳು ಮಾಡಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಬಂಡವಾಳಶಾಹಿಗಳ ಗುಲಾಮರೇ ಅಧೀಕ ಪ್ರಮಾಣದಲ್ಲಿ ಜನಪ್ರತಿನಿಧಿಗಳಿದ್ದಾರೆ. ನಾವು ತಿಳಿದುಕೊಂಡಂತೆ ಪ್ರಜಾಪ್ರಭುತ್ವದ ಸರ್ಕಾರಗಳು ಅಸ್ತಿತ್ವದಲ್ಲಿ ಇಲ್ಲ, ಬಂಡವಾಳಶಾಹಿಗಳ ನಿಯಂತ್ರಣದಲ್ಲಿರುವ ಸರ್ಕಾರಗಳು ಅಸ್ತಿತ್ವದಲ್ಲಿವೆ. ಈ ಬಂಡವಾಳಶಾಹಿಗಳ ಸರ್ಕಾರಗಳಿಂದಲೆ ಇಂದು ದೇಶದ ಬಡವರು, ಕಾರ್ಮಿಕರು, ರೈತರು, ಮಹಿಳೆಯರು ಸೆರಿದಂತೆ ದೇಶದ ಪ್ರತಿಯೊಬ್ಬ ನಾಗರಿಕನು ಶೋಷಣೆಗೆ ಒಳಗಾಗುತ್ತಿದ್ದಾನೆ. ಸರ್ಕಾರದ ಬಹುತೇಕ ಯೋಜನೆಗಳು, ನಿರ್ಧಾರಗಳು ಹಾಗೂ ಕಾಯ್ದೆಗಳು ಬಂಡವಾಳಶಾಹಿಗಳ ಪರ ಇರುತ್ತವೆ. ಈ ವ್ಯವಸ್ಥೆಯ ಬದಲಾವಣೆಗೆ ನಾವು ಕಂಕಣಬದ್ಧರಾಗಬೇಕಾಗಿದೆ.
ಈ ಹಿಂದೆ ಬಂಡವಾಳಶಾಹಿಗಳು ಪರೋಕ್ಷವಾಗಿ ಆಳುವ ಸರ್ಕಾರಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುತಿದ್ದರು ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ರಾಜಕೀಯ ಪರಿಸ್ಥಿತಿ ಬದಲಾವಣೆಯಾಗಿ ಬಂಡವಾಳಶಾಹಿಗಳೇ ಪ್ರತ್ಯಕ್ಷವಾಗಿ ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಂಡವಾಳಶಾಹಿಗಳು ಇಡಿ ಚುನಾವಣಾ ವ್ಯವಸ್ಥೆಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಹಣ, ಹೆಂಡ ಮತ್ತು ಖಂಡದ ರುಚಿಯನ್ನು ತೋರಿಸುವುದರ ಜೊತೆಗೆ ವಿವಿಧ ಆಸೆ-ಆಮಿಷಗಳನ್ನು ಮತದಾರನಿಗೆ ತೋರಿಸಿ ಮತದಾನದ ಮೇಲೆ ಪ್ರಭಾವ ಬೀರುತ್ತಿದ್ದಾರೆ. ನಾವು ಮತದಾರನಿಗೆ ತನ್ನ ಮತದ ಮೌಲ್ಯದ ಬಗ್ಗೆ ಅರಿವು ಮೂಡಿಸುದರ ಜೊತೆಗೆ ಬಂಡವಾಳಶಾಹಿಗಳ ಕುತಂತ್ರಗಳ ಬಗ್ಗೆ ತಿಳಿಸಿಕೊಡಬೇಕಾದ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ.

ನಮ್ಮ ಈ ನಾಡಿನಲ್ಲಿ ನಮ್ಮ ಬಾಗಲಕೋಟೆ ಜಿಲ್ಲೆ ಸಾಮಾಜಿಕ ಬದಲಾವಣೆಗೆ, ಬಂಡಾಯಕ್ಕೆ, ಸಮರ್ಥ ಆಡಳಿತಕ್ಕೆ ಹೆಸರುವಾಸಿವಾಗಿದೆ. ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಸಮಾನತೆಗಾಗಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ನೆಲ ನಮ್ಮದು. ಬದಾಮಿಯ ಚಾಲುಕ್ಯರು ಇಡಿ ದಕ್ಷಿಣ ಭಾರತವನ್ನು ಆಳ್ವಿಕೆ ಮಾಡಿದ ವೀರ ಇಮ್ಮಡಿಯ ಪುಲಕೇಶಿಯ ನೆಲ ನಮ್ಮದು. ಮಿಲಿಟರಿ ಶಕ್ತಿಯ ಮೂಲಕ ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಆಳ್ವಿಕೆ ಮಾಡಿದ ಬ್ರಿಟಿಷರ ಈ ದೊಡ್ಡ ಸಾಮ್ರಾಜ್ಯದ ವಿರುದ್ಧ ಪ್ರಾಣವನ್ನು ಲೆಕ್ಕಿಸದೇ ಜಡಗಣ್ಣ-ಬಾಲಣ್ಣ ನೇತೃತ್ವದಲ್ಲಿ ಹಲಗಲಿ ಬಂಡಾಯ ಮಾಡಿದ ನೆಲ ನಮ್ಮದು. ಈ ಐತಿಹಾಸಿಕ ಇತಿಹಾಸವನ್ನು ಹೊಂದಿರುವ ನಾವು ಪ್ರಜಾಪ್ರಭುತ್ವದ ಉಳಿವಿಗಾಗಿ, ಜನ ಸಾಮಾನ್ಯರ ನೆಮ್ಮದಿಯ ಬದುಕಿಗಾಗಿ ಇಂದು ನಾವು ಹೋರಾಟ ಮಾಡಬೇಕಾಗಿದೆ. ಇಲ್ಲಿ ಆರಂಭವಾದ ಕ್ರಾಂತಿಕಾರಿ ಹೋರಾಟಗಳು ಮುಂದೆ ಇಡಿ ರಾಜ್ಯ ಮತ್ತು ದೇಶವನ್ನು ವ್ಯಾಪಿಸಿವೆ ಇಂದು ನಾವು ಬಂಡವಾಳಶಾಹಿಗಳ ವಿರುದ್ಧ ಪ್ರಜಾಪ್ರಭುತ್ವದ ಉಳುವಿಗಾಗಿ ಬಂಡಾಯದ ಮುನ್ನಡಿಯನ್ನು ಬರೆಯಬೇಕಾಗಿದೆ. ನವ ಇತಿಹಾಸವನ್ನು ಬರೆಯಬೇಕಾಗಿದೆ.

ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗುತ್ತಿರುವ ಜನಪ್ರತಿನಿಧಿಗಳು ಯಾರು ? ಅವರ ಹಿನ್ನಲೇ ಏನು ? ಎಂದು ಅರಿತು ಕೊಳ್ಳುವ ಸಮಯ ಬಂದಿದೆ. ಇದೇ ಸಕ್ಕರೆ ಕಾರ್ಖಾನೆಯ ಮಾಲೀಕರು, ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕಪ್ಪು ಹಣವನ್ನು ಸಕ್ರಮ ಮಾಡಿಕೋಳ್ಳಲು ಸ್ಥಾಪನೆ ಮಾಡಿದ ಸಹಕಾರ ರಂಗದ ಬ್ಯಾಂಕುಗಳ ಮುಖ್ಯಸ್ಥರು ಇಡಿ ಬಾಗಲಕೋಟೆ ಜಿಲ್ಲೆಯ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ.
ಇವರಿಗೆ ಯಾವುದೇ ಧರ್ಮವಿಲ್ಲ, ಜಾತಿಯಿಲ್ಲ, ಪಕ್ಷಗಳಿಲ್ಲ ಇವರು ಮೇಲ್ನೋಟಕ್ಕೆ ಸತ್ಯ ಹರಿಚಂದ್ರರಂತೆ ನಾಟಕ ಮಾಡಿ ಹೊಂದಾಣಿಕೆ ರಾಜಕಾರಣ ಮಾಡಿ ಇಡಿ ವ್ಯವಸ್ಥೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆಯ ಮಾಲಿಕರು ರೈತರಿಗೆ ಯೋಗ್ಯವಾದ ಬೆಲೆ ನೀಡುವುದಿಲ್ಲ. ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡುವುದಿಲ್ಲ. ತೂಕದಲ್ಲಿ, ರಿಕವರಿಯಲ್ಲಿ ಮೋಸ ಮಾಡುವುದನ್ನು ಬೀಡುವುದಿಲ್ಲ. ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನವಿಲ್ಲ, ಉದ್ಯೋಗ ಭದ್ರತೆಯಿಲ್ಲ, ಕಾರ್ಮಿಕರ ಹಕ್ಕುಗಳಿಗೆ ಬೆಲೆಯಿಲ್ಲ. ಅದೇ ರೀತಿ ಡಿಸಿಸಿ ಬ್ಯಾಂಕಗಳಿಂದ ರೈತರಿಗೆ ಸಹಕಾರವಾಗಲಿ, ಸಕಾಲದಲ್ಲಿ ಸಾಲ-ಸೌಲಭ್ಯ ದೊರೆಯಲಿ, ರೈತರು ಆರ್ಥಿಕವಾಗಿ ಸದೃಢವಾಗಲಿ ಎಂಬ ಮೂಲ ಆಶೆಯವಾಗಿದೆ. ನಮ್ಮ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಿಗೆ ಈ ಬ್ಯಾಂಕ “ಬಂಗಾರದ ಮೊಟ್ಟೆ ಇಡುವ ಕೋಳಿಯಂತಾಗಿದೆ. ನೂರಾರು ಕೋಟಿ ರುಪಾಯಿಗಳ ಸಾಲ-ಸೌಲಭ್ಯವನ್ನು ಈ ನಿರ್ದೇಶಕರು ತಮಗೆ ಹಾಗೂ ತಮ್ಮ ಆಪ್ತರಿಗೆ ನೀಡಿ ಉಧ್ಯಮಗಳನ್ನು ಸ್ಥಾಪನೆ ಮಾಡಿ ಬ್ಯಾಂಕಿಗೆ ಸರಿಯಾದ ಸಮಯಕ್ಕೆ ಸಾಲದ ಹಣವನ್ನು ಪಾವತಿ ಮಾಡದೇ ಪಂಗನಾಮ ಹಾಕಿ ನೂರಾರು ಕೋಟಿ ರೂಪಾಯಿಗಳನ್ನು ಟೋಪಿ ಹಾಕಿದ್ದಾರೆ.

ಬಂಡಾಯ ಯಾತ್ರೆಯ ಮಾರ್ಗ: 
ಹಲಗಲ ಗ್ರಾಮದಿಂದ ಪ್ರಾರಂಭ - ಜೆಮ್ ಶುಗರ್ ಆ, ಕುಂದರಗಿ ಬೀಳಗಿ ಶುಗರ್ ಅ, ಬಾಡಗಂಡಿ - ಇ.ಐ.ಡಿ ಪ್ಯಾರಿ ಅ. ಸದಾಶಿವ ಸಕ್ಕರೆ ಕಾರ್ಖಾನ ನಾಯಿಯನೇಗಲ ಬದಾಮಿ ಶುಗರ್ ಎಮ್.ಆರ್.ಎನ್ ಕೇನ್ ಪವರ್ ಅ, ಕಲ್ಲಾಪೂರ - ಕೇಧಾರನಾಥ ಶುಗರ್ ೮, ಕೆರಕಲಮಟ್ಟ ರೈತರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ತಿಮ್ಮಾಪೂರ 'ಇಂಡಿಯನ್ ಕೇನ್ ಪವರ್ ಅ, ಉತ್ತೂರ - ಗೋದಾವರಿ ಶುಗರ್ ಅ ಸಮೀರವಾಡಿ - ಸಾವರೀನ್ ಸಕ್ಕರೆ ಕಾರ್ಖಾನೆ, ತೇರದಾಳ - ಸಾಯಿಪ್ರೀಯ ಶುಗರ್ ಅ, ಹಿಪ್ಪರಗಿ/ಮೈಗೂರ - ಜಮಖಂಡಿ ಶುಗರ್ ಅ, ಹಿರೇಪಡಸಲಗಿ - ಪ್ರಭುಲಿಂಗೇಶ್ವರ ಶುಗರ್ ಅ, ಸಿದ್ದಾಪೂರ - ನಿರಾಣಿ ಶುಗರ್ ಅ, ಮುಧೋಳ - ಕ್ರಾಂತಿವೀರ ಸಂಗೊಟ್ಟ ರಾಯಣ್ಣ ವೃತ್ತದಲ್ಲಿ ಮುಕ್ತಾಯ.

ಈ ಬಂಡವಾಳಶಾಹಿಗಳು ತಮ್ಮಲ್ಲಿರುವ ಕಪ್ಪು ಹಣವನ್ನು ಸಕ್ರಮ ಹಣವನ್ನಾಗಿ ಮಾಡಿಕೋಳ್ಳಲು ತಮ್ಮದೇ ಆದ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ಶಿಕ್ಷಣ ಸಂಸ್ಥೆಗಳ ಅಸ್ತಿತ್ವದ ಉಳಿವಿಗಾಗಿ ಸರ್ಕಾರದ ನೀತಿ-ನಿರುಪಣೆಯ ಮೇಲೆ ಪ್ರಭಾವ ಬೀರಲು ಶಾಸನ ಸಭೆಗೆ ಆಯ್ಕೆಯಾಗುತ್ತಿದ್ದಾರೆ. ಇವರೆಲ್ಲರು ಒಂದೇ ನಾಣ್ಯದ ಮುಖಗಳು ಹೊಂದಾಣಿಕೆ ರಾಜಕಾರಣದ ಜೊತೆಗೆ ಸಾಮಾಜಿಕ ರಂಗದಲ್ಲಿ, ರಾಜಕೀಯ ವ್ಯವಸ್ಥೆಯಲ್ಲಿ ಹೊಸತನ ಮೂಡಿಸುವ ವ್ಯಕ್ತಿಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಒಂದಾಗಿ ವ್ಯವಸ್ಥಿತವಾಗಿ ಸಂಚು ಹಾಕಿ ಮುಗಿಸುತ್ತಾರೆ. ಇಂತಹ ಕುತಂತ್ರಿಗಳು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಾಗುತ್ತಿದ್ದಾರೆ. ಇವರು ಹಣ, ಹೆಂಡ, ಮತ್ತು ಖಂಡದ ಆಸೆ ಆಮಿಷಗಳನ್ನು ಮತದಾರರಿಗೆ ತೋರಿಸಿ ಮತ್ತು ಪ್ರಜ್ಞಾವಂತ ಸಾಮಾನ್ಯ ಜನರನ್ನು ತಮ್ಮ ತೋಳಬಲದ ಮೂಲಕ ಎದುರಿಸಿ ಅವರ ಧ್ವನಿಯನ್ನು ಅಡಗಿಸುತ್ತಿದ್ದಾರೆ. ಇಂತವರ ವಿರುದ್ಧ ನಾವು ಬಂಡಾಯ ಏಳದೆ ಗುಲಾಮರಾಗಿ ಜೀವನ ಸಾಗಿಸಬೇಕೆ ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದೆ. 2023ರ ವಿಧಾನಸಭೆಯ ಚುನಾವಣೆಯಲ್ಲಿ ಪ್ರಭುದ್ಧತೆಯಿಂದ ಮತ ಚಲಾವಣೆ ಮಾಡಬೇಕಾಗಿದೆ. ದೆಹಲಿಯ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಮುಕ್ತಿ ಹೊಂದಬೇಕಾಗಿದೆ. ಬಂಡವಾಳ ಶಾಹಿಗಳನ್ನು ತೀರಸ್ಕರಿಸಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆಯ ಬದಲಾವಣೆಗಾಗಿ ನಾವು ನಮಗೆ ಸ್ಪೂರ್ತಿಯಾದ ಹಲಗಲಿಯ ಬಂಡಾಯದ ನೆಲದಿಂದ ಬಂಡವಾಳಶಾಹಿಗಳ ವಿರುದ್ಧ ಬಂಡಾಯ ಯಾತ್ರೆಯನ್ನು ಅಕ್ಟೋಬರ್ 2 ರಿಂದ 16 ರ ವರಗೆ ಮಾಡಲಿದ್ದೇವೆ. ಈ ಬಂಡಾಯ ಯಾತ್ರೆಯು ಮುಧೋಳ ತಾಲೂಕಿನ ಹಲಗಲಿ ಗ್ರಾಮದಿಂದ ಪ್ರಾರಂಭವಾಗಿ ಜಿಲ್ಲೆಯಲ್ಲಿರುವ 14 ಸಕ್ಕರೆ ಕಾರ್ಖಾನೆಗಳ ಮುಂದೆ ಹಾದು ಹೋಗಲಿದೆ ಒಟ್ಟು 500 ಕಿ.ಮೀ ದೂರವನ್ನು ಪ್ರತಿದಿನ 30 ರಿಂದ 40 ಕಿ.ಮೀ ಪಾದಯಾತ್ರೆ ಮೂಲಕ ಜನರಿಗೆ ಜಿಲ್ಲೆಯಲ್ಲಿರುವ ಬಂಡವಾಳಶಾಹಿಗಳ ಕುತಂತ್ರಗಳ ಬಗ್ಗೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯದ ಬಗ್ಗೆ ಅರಿವು ಮೂಡಿಸಲಾಗುವುದು.ಒಟ್ಟು 15 ದಿನಗಳ ಕಾಲ ಈ ಬಂಡಾಯ ಯಾತ್ರೆ ನಡೆಯಲಿದೆ. ಅಕ್ಟೋಬರ್ 16 ರಂದು ಮುಧೋಳದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮುಕ್ತಾಯವಾಗಲಿದೆ.ಈ ಬಂಡಾಯ ಯಾತ್ರೆಗೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳುವಿಗಾಗಿ ಬೆಂಬಲಿಸುವುದರ ಜೊತೆಗೆ ಭಾಗವಹಿಸಬೇಕೆಂದು ವಿನಂತಿಸುತ್ತೇವೆ.


0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ