Ts ads

28 ಜುಲೈ, 2022

ಆಗಸ್ಟ್‌ನಲ್ಲಿ ಈ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿ ಹಾಕಿ.. 70 ಸಾವಿರದಿಂದ 10 ಲಕ್ಷದ ವರೆಗೆ ವಿದ್ಯಾರ್ಥಿವೇತನ ಪಡೆಯಿರಿ

ಈ ಸ್ಕಾಲರ್‌ಶಿಪ್‌ ಮತ್ತು ಫೆಲೋಶಿಪ್‌ಗಳು ನಿಮ್ಮ ಮುಂದಿನ ವೃತ್ತಿಜೀವನವನ್ನು ಆರಂಭಿಸಲು ಸಹಾಯ ಮಾಡಬಹುದು. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನಗಳಿಂದ, ಕಡಿಮೆ ಶುಲ್ಕದಲ್ಲಿ ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಲು ಸಹಾಯಕವಾಗುತ್ತದೆ.




ಆಗಸ್ಟ್‌ನಲ್ಲಿ ಈ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿ ಹಾಕಿ.. 70 ಸಾವಿರದಿಂದ 10 ಲಕ್ಷದ ವರೆಗೆ ವಿದ್ಯಾರ್ಥಿವೇತನ ಪಡೆಯಿರಿ.

ವಿದ್ಯಾರ್ಥಿವೇತನ, ವಿದ್ಯಾರ್ಥಿಗಳ ಅಧ್ಯನಕ್ಕೆ ಅನೂಕಲಕ್ಕಾಗಿ ನೀಡುವ ಒಂದು ಹಣಕಾಸಿನ ನೆರವಿನ ರೂಪವಾಗಿದೆ. ವಿದ್ಯಾರ್ಥಿವೇತನವನ್ನು ವಿವಿಧ ವಯಸ್ಸಿನ ಮತ್ತು ಅರ್ಹತೆಗಳ ವಿದ್ಯಾರ್ಥಿಗಳಿಗೆ ನೆರವಿನ ರೂಪದಲ್ಲಿ ನೀಡಲಾಗುತ್ತದೆ. ಸ್ಕಾಲರ್‌ಶೀಪ್‌ಗಳನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು. ದೇಶದಲ್ಲಿ ಕೋವಿಡ್‌ ಹೆಚ್ಚಾದ ಸಮಯದಲ್ಲಿ ಅನೇಕ ವಿದ್ಯಾರ್ಥಿವೇತನಗಳ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು. ಅದರಲ್ಲೂ ಕೆಲವು ಸ್ಕಾಲರ್‌ಶಿಪ್‌ ಯೋಜನೆಗಳು ತಂದೆ, ತಾಯಿ, ಪೋಷಕರನ್ನು ಕಳೆದುಕೊಂಡು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾದವು.

ಇನ್ನೂ ನಾವು ನಿಮಗೆ ಆಗಸ್ಟ್ ತಿಂಗಳಲ್ಲಿ ಯಾವ, ಯಾವ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು ಎನ್ನುವ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಈ ಸ್ಕಾಲರ್‌ಶಿಪ್‌ ಮತ್ತು ಫೆಲೋಶಿಪ್‌ಗಳು ನಿಮ್ಮ ಮುಂದಿನ ವೃತ್ತಿಜೀವನವನ್ನು ಆರಂಭಿಸಲು ಸಹಾಯ ಮಾಡಬಹುದು. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನಗಳಿಂದ, ಕಡಿಮೆ ಶುಲ್ಕದಲ್ಲಿ ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಲು ಸಹಾಯಕವಾಗುತ್ತದೆ.
ದಿ ರೋಡ್ಸ್‌ ಸ್ಕಾಲರ್‌ಶಿಪ್ಸ್‌ ಫಾರ್ ಇಂಡಿಯಾ 2022-23

ದಿ ರೋಡ್ಸ್‌ ಸ್ಕಾಲರ್‌ಶಿಪ್ಸ್‌ ಫಾರ್ ಇಂಡಿಯಾ, ಈ ಸ್ಕಾಲರ್‌ಶಿಪ್‌ನ್ನು ಭಾರತದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ, ರೋಡ್ಸ್‌ ಟ್ರಸ್ಟ್‌ (ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ) ಈ ವೇತನವನ್ನು ನೀಡುತ್ತದೆ. ಜಾಗತಿಕ ಮಟ್ಟದಲ್ಲಿ ಬೆಳೆಯಲು ಈ ಸ್ಕಾಲರ್‌ಶಿಪ್‌ ಸಹಾಯ ಮಾಡುತ್ತದೆ. ಆರ್ಥಿಕವಾಗಿ ಹಿಂದುಳಿದ ಬುದ್ದಿವಂತ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಈ ಸ್ಕಾಲರ್‌ಶಿಪ್‌ ಸಹಾಯವಾಗಲಿದೆ. ಈ ಸ್ಕಾಲರ್‌ಶಿಪ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, 01-08-2022 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್ ಪ್ರೋಗ್ರಾಮ್‌

Colgate-Palmolive (India) Ltd. ಈ ಕ್ರೀಡಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಮತ್ತು ತರಬೇತಿ, ವೈದ್ಯಕೀಯ ಮತ್ತು ಇತರ ವೆಚ್ಚಗಳಿಗಾಗಿ ಹಣಕಾಸಿನ ನೆರವು ಪಡೆಯಲು ಯುವ ಕ್ರೀಡಾಪಟುಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಬಡ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಈ ಸ್ಕಾಲರ್‌ಶಿಪ್‌ ಹೊಂದಿದೆ.

  • ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕ್ರೀಡೆಯಲ್ಲಿ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಅಥವಾ ರಾಷ್ಟ್ರೀಯ ಮಟ್ಟದ ತಂಡಗಳನ್ನು ಪ್ರತಿನಿಧಿಸಿರುವ ಮತ್ತು 500 (ರಾಷ್ಟ್ರೀಯ ಮಟ್ಟ), 100 (ರಾಜ್ಯ ಮಟ್ಟ), ಅಥವಾ 10 (ಜಿಲ್ಲಾ ಮಟ್ಟ)ದ ಸ್ಪರ್ಧೆಯಲ್ಲಿ ಶ್ರೇಯಾಂಕ ಹೊಂದಿರುವ ಭಾರತೀಯ ಕ್ರೀಡಾಪಟುಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಒಟ್ಟು ಕುಟುಂಬದ ಆದಾಯ ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಫಿಟ್‌ನೆಸ್‌, ಆರೋಗ್ಯ ರಕ್ಷಣೆ, ತರಬೇತಿ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ನಿರ್ವಹಿಸಲು ಮೂರು ವರ್ಷದವರೆಗೆ, ವರ್ಷಕ್ಕೆ 75,000 ವಿದ್ಯಾರ್ಥಿವೇತನ ನೀಡಲಾಗುತ್ತದೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 31-08-2022
  • ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ಲಿಂಕ್‌- www.b4s.in/it/CSP2

IET ಇಂಡಿಯಾ ಸ್ಕಾಲರ್‌ಶಿಪ್
ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (IET) ಪದವಿಪೂರ್ವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸೃಜನಶೀಲತೆ, ನಾಯಕತ್ವ ಮತ್ತು ಶ್ರೇಷ್ಠತೆಯನ್ನು ಗುರುತಿಸಲು ಈ ಸ್ಕಾಲರ್‌ಶಿಪ್‌ ನೀಡಲಾಗುತ್ತದೆ. ಭಾರತದ ಭವಿಷ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ.

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ 1ರಿಂದ 4ನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
  • 2 ನೇ ವರ್ಷದಲ್ಲಿ ಬಿಟೆಕ್ ಕಾರ್ಯಕ್ರಮಕ್ಕೆ ಸೇರುವ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
  • ಯಾವುದೇ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದರು, ಹಿಂದಿನ ವರ್ಷದ ಫಲಿತಾಂಶದಲ್ಲಿ ಶೇಕಡ 60 ಅಂಕ ಪಡೆದಿರಬೇಕು. ಸುಮಾರು 10,00,000ದ ವರೆಗೆ ಸ್ಕಾಲರ್‌ಶಿಪ್‌ ನೀಡಲಾಗುವುದು.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -01-08-2022
  • ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ಲಿಂಕ್‌- https://scholarships.theietevents.com/

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ