Ts ads

18 ಜುಲೈ, 2022

ಬೀಳುವ ಭೀತಿಯಿಂದ ಬೆಳಗಾವಿಯಲ್ಲಿ 300ಕ್ಕೂ ಹೆಚ್ಚು ತರಗತಿ ಕೊಠಡಿಗಳನ್ನು ಖಾಲಿ ಮಾಡಲಾಗಿದೆ.

ಖಾನಾಪುರ ತಾಲೂಕಿನಲ್ಲಿ ಒಂದು ವಾರದಿಂದ  ಎಡೆಬಿಡದೆ ಸುರಿದ ಬಾರಿ ಮಳೆಯಿಂದಾಗಿ ನಾಲ್ಕು ಶಾಲೆಗಳು ಕುಸಿದಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಶಿಥಿಲಗೊಂಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 300 ತರಗತಿ ಕೊಠಡಿಗಳನ್ನು ಶಿಕ್ಷಣ ಇಲಾಖೆ ಅಂತಹ ಶಾಲೆಗಳನ್ನು ಮುಚ್ಚಿದೆ.

ತರಗತಿಗಳನ್ನು ಮುಂದುವರಿಸಲು ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿದೆ. ಬೆಳಗಾವಿ ನಗರದಲ್ಲಿ ಕೆಲವು ತರಗತಿ ಕೊಠಡಿಗಳನ್ನು ಬಾಡಿಗೆಗೆ ತೆಗೆದುಕೊಂಡ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ.

ಆದರೆ, ಗ್ರಾಮೀಣ ಪ್ರದೇಶದಲ್ಲಿ ಕೆಲವು ಶಾಲೆಗಳಲ್ಲಿ ಸಂಯೋಜಿತ ತರಗತಿಗಳು ನಡೆಯುತ್ತಿವೆ. 

ಕೆಲವು ಶಾಲೆಗಳಲ್ಲಿ ಗ್ರಂಥಾಲಯ ಹಾಗೂ ಪಠ್ಯಕ್ರಮದ ಹೆಚ್ಚುವರಿ ಚಟುವಟಿಕೆ ಕೊಠಡಿಗಳನ್ನು ತರಗತಿಗಳಿಗೆ ಬಳಸುತ್ತಿದ್ದೇವೆ, ಕೆಲವು ಗ್ರಾಮಗಳಲ್ಲಿ ಹೊಸ ಕಟ್ಟಡಗಳಿದ್ದರೂ ಹಸ್ತಾಂತರವಾಗದೆ ಈಗ ಆ ಕಟ್ಟಡಗಳನ್ನು ಬಳಸುತ್ತಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ (ಡಿಡಿಪಿಐ) ಬಸವರಾಜ ನಾಲತವಾಡ ಮಾಧ್ಯಮಗಳಿಗೆ ತಿಳಿಸಿದರು.
ತರಗತಿ ಕೊಠಡಿಗಳ ದುರಸ್ತಿಗೆ ಹಣದ ಕೊರತೆ ಇಲ್ಲ ಎಂದು ನಾಲತವಾಡ ಹೇಳಿದರು. ‘ಮಳೆ ನಿಂತ ನಂತರ ದುರಸ್ತಿ ಕಾರ್ಯ ಆರಂಭಿಸುತ್ತೇವೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮೇಲ್ಛಾವಣಿ ದುರಸ್ತಿ, ಶಾಲೆಗಳ ಆವರಣದಲ್ಲಿ ಪೇವರ್ಸ್‌ ಅಳವಡಿಸುವುದು, ಶೌಚಾಲಯ ನಿರ್ಮಾಣ ಇತ್ಯಾದಿ ದುರಸ್ತಿಗೆ ಅವಕಾಶವಿದೆ. ಸರ್ಕಾರದ ನಿಧಿಯೂ ಇದೆ. NRDF ಮತ್ತು NABARD ಯೋಜನೆಗಳ ಅಡಿಯಲ್ಲಿ ಮುಲಸೌಕರ್ಯಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ನಾಲತವಾಡ ಹೇಳಿದರು.

ಮೂಲಗಳ ಪ್ರಕಾರ ಜಿಲ್ಲೆಯ ಬಹುತೇಕ ಹಳೆಯ ಶಾಲೆಗಳು ಅದರಲ್ಲೂ ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳ ಮುರಿದಿದ್ದು ಹೆಂಚುಗಳು ಸೋರುತ್ತಿವೆ. ಹೆಂಚುಗಳ ಹಾನಿಯು ಸೋರಿಕೆ ಮತ್ತು ಕೊಠಡಿಗಳು ಕುಸಿದು ಬಿಳಲು ಕಾರಣವಾಗುತ್ತಿವೆ.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ