Ts ads

This is default featured post 1 title

Go to Blogger edit html and find these sentences.Now replace these sentences with your own descriptions.

03 ಮಾರ್ಚ್, 2025

ಪದವಿ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯಕ್ಕೆ ಬಹಿಷ್ಕಾರ

 ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಾಪಕರ ನಡುವೆ "ಮಾರ್ಕೆಟ್ ಬಿಹೇವಿಯರ್ ಅಂಡ್ ಬಿಜನೆಸ್ ಡಿಸಿಷನ್" ವಿಷಯದ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಕುರಿತು ಉಂಟಾದ ವಿವಾದವು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯಕ್ಕೆ ಬಹಿಷ್ಕಾರಕ್ಕೆ ಕಾರಣವಾಗಿದೆ. ಈ ವಿವಾದದಿಂದಾಗಿ ಪ್ರಥಮ ಸೆಮಿಸ್ಟರ್ ಬಿಕಾಂನ ಎಲ್ಲಾ ವಾಣಿಜ್ಯ ವಿಷಯಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಸ್ಥಗಿತಗೊಂಡಿದೆ. ವಿವಾದದ ಹಿನ್ನೆಲೆ: ಬಿ.ಕಾಮ್ ಪದವಿ ಪಠ್ಯಕ್ರಮದಲ್ಲಿ ಪ್ರತಿ ಸೆಮಿಸ್ಟರ್ ಒಟ್ಟು ಆರು ವಿಷಯಗಳಿವೆ. ಇವುಗಳಲ್ಲಿ ವಾಣಿಜ್ಯಶಾಸ್ತ್ರದ ಅಧ್ಯಾಪಕರು ಬೋಧಿಸಬಹುದಾದ ವಿಷಯಗಳು ಮೂರು: ಫೈನಾನ್ಸಿಯಲ್ ಅಕೌಂಟಿಂಗ್, ಮೊಡರ್ನ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್ ಮತ್ತು ಮಾರ್ಕೆಟ್ ಬಿಹೇವಿಯರ್ ಅಂಡ್ ಬಿಜನೆಸ್ ಡಿಸಿಷನ್. ಉಳಿದ ಮೂರು ವಿಷಯಗಳು ಕನ್ನಡ, ಇಂಗ್ಲಿಷ್...

27 ಫೆಬ್ರವರಿ, 2025

ಜಾಗತೀಕರಣ ವಾಣಿಜ್ಯ ಅಧ್ಯಯನ ಕ್ಷೇತ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ : ಪ್ರೊ. ಬಿ ಎಸ್ ನಾವಿ ಕಳವಳ.

ಬೆಳಗಾವಿ : ಜಾಗತೀಕರಣವು ವಾಣಿಜ್ಯ ಅಧ್ಯಯನ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭೌತಿಕ ಬುದ್ಧಿಮತ್ತೆ ಮತ್ತು ಇತರ ಹೊಸ ಅಧ್ಯಯನ ಕ್ಷೇತ್ರಗಳು ತೆರೆದುಕೊಳ್ಳುತ್ತಿದ್ದು, ಇದರಿಂದ ವಾಣಿಜ್ಯ ಅಧ್ಯಯನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮುಂಬರುವ ಪೀಳಿಗೆ ಈ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಮತ್ತು ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವಿದ್ಯಾಲಯದ ಬಿ ಎಸ್ ನಾವಿ ಅವರು ಕಳವಳ ವ್ಯಕತಪಡಿಸಿದ್ದಾರೆ. ಬೆಳಗಾವಿಯ ಮಹಾಂತ ಭವನದಲ್ಲಿ ಗುರುವಾರ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಮಹಾವಿದ್ಯಾಲಯ ಅಧ್ಯಾಪಕರ ಸಂಘವು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ, ಜಾಗತೀಕರಣದ ಪ್ರಭಾವ ಮತ್ತು ವಾಣಿಜ್ಯ ಅಧ್ಯಯನ ಕ್ಷೇತ್ರದ ಮೇಲಿನ ಪರಿಣಾಮಗಳ ಕುರಿತು ಪ್ರೊ. ಬಿ. ಎಸ್. ನಾವಿ ಮತ್ತು ಎಸ್. ಬಿ. ಆಕಾಶ ಅವರು ತಮ್ಮ ಅಭಿಪ್ರಾಯಗಳನ್ನು...

19 ಫೆಬ್ರವರಿ, 2025

ವಾಣಿಜ್ಯ ಶಾಸ್ತ್ರದ ಅಧ್ಯಾಪಕರಾಗಿ ಕಾರ್ಯ ಮಾಡುತ್ತಿರುವವರ ಕೆಲಸ ಕಸಿದುಕೊಳ್ಳುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.

ಬೆಳಗಾವಿ : ಬಿಕಾಂ ವಿಷಯದ ಹಂಚಿಕೆ ಮತ್ತು ಬೋಧನೆಯಲ್ಲಿ ಉಂಟಾದ ಗೊಂದಲ ನಿವಾರಣೆಗೆ ಒತ್ತಾಯಿಸಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ  ಅಧ್ಯಾಪಕರ ಸಂಘದ ಪದಾಧಿಕಾರಿಗಳು ಬುಧವಾರ ಆರ್‌ಸಿಯು ಕುಲಸಚಿವ ಪ್ರೊ. ಸಂತೋಷ್ ಕಾಮಗೊಂಡ ಅವರಿಗೆ ವಿದ್ಯಾಸಂಗಮ ಆವರಣದಲ್ಲಿ ಮನವಿ ಸಲ್ಲಿಸಿದರು.ಬಿಕಾಂ ಪದವಿಯಲ್ಲಿ ಮೊದಲ ಸೆಮಿಸ್ಟರ್ ಬೋಧಿಸಲಾಗುವ ಮಾರ್ಕೆಟ್ ಬಿಹೇವಿಯರ ಆ್ಯಂಡ್ ಬಿಜಿನೆಸ್ ಡಿಸಿಜನ್ ವಿಷಯವನ್ನು ಅರ್ಥಶಾಸ್ತ್ರದ ಪ್ರಾಧ್ಯಾಪಕರು ಪದವಿ ಕಾಲೇಜುಗಳಲ್ಲಿ ಬೋಧಿಸುತ್ತಿದ್ದಾರೆ. ಆದರೆ ಈ ವಿಷಯ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಮುಗಿಸಿರುವರು ಪ್ರಾಧ್ಯಪಕರಾಗಿ ಕಲಿಸುವುದು ಸೂಕ್ತ. ಆದರೆ ಈ ವಿಷಯವನ್ನು ಅರ್ಥಶಾಸ್ತ್ರದ ಪ್ರಾಧ್ಯಾಪಕರಿಂದ ಬೋಧನೆ ಮಾಡಿಸುವ ಮೂಲಕ ವಾಣಿಜ್ಯ ಶಾಸ್ತ್ರ ಸಂತಕೋತ್ತರ ಪದವಿದರಾಗಿ ಅಧ್ಯಾಪಕರಿರುವವರಿಗೆ ಕೆಲಸ ದೊರೆಯುತ್ತಿಲ್ಲ ಮತ್ತು ಅನ್ಯಾಯವಾಗುತ್ತಿದೆ. ಆದ್ದರಿಂದ ಆರ್‌ಸಿಯು...

09 ಜುಲೈ, 2024

ಶರಣ ಪರಂಪರೆ, ಭಕ್ತಿ ಮತ್ತು ಕಾಯಕ ಮತ್ತು ಮಹಿಳಾ ಸಮಾನತೆ ಮತ್ತು ಸಮಾಜದ ಸಾಮರಸ್ಯಕ್ಕಾಗಿ ಶರಣರು ನೀಡಿದ ಕೊಡುಗೆ ಅಪಾರ

ಬೆಳಗಾವಿ: ಪ್ರಸಕ್ತ ದಿನಗಳಲ್ಲಿ ಬಸವಣ್ಣ ಮತ್ತು ಶರಣರ ಮೂಲ ಆದರ್ಶಗಳನ್ನು ಮರೆಮಾಚಲಾಗುತ್ತಿದೆ. ಹಾಗಾಗೀ ಶರಣರ ರಚಿಸಿದ ಮೂಲ ವಚನಗಳ ಆಧಾರದ ಮೇಲೆ ಶರಣರ ಮತ್ತು ಬಸವಣ್ಣ ಅವರ ನೈಜ ಅದರ್ಶಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಗದಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಪ .ಪೂ. ಶ್ರೀ ಸದಾಶಿವಾನಂದ ಸ್ವಾಮೀಜಿ ಹೇಳಿದರು.ನಗರದ ನೆಹರೂನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶರಣರಷ್ಟು ಸಮಾಜ ಮತ್ತು ಭಕ್ತಿಯ ಬಗ್ಗೆ ತಿಳಿಯದ ಅನೇಕ ಮೂಢರು, ಬಸವಣ್ಣ ಮತ್ತು ಶರಣರ ವಚನಗಳನ್ನು ತಪ್ಪಾದ ಪ್ರಯೋಗ ಮತ್ತು ವ್ಯಾಖ್ಯಾನಿಸುವ ಮೂಲಕ ಶರಣರ ಸಂದೇಶಗಳನ್ನು ಪ್ರಸಕ್ತ ಪೀಳಿಗೆಗೆ ತಪ್ಪಾಗಿ ಅರ್ಥೈಸಲಾಗುತ್ತಿರುವುದು ಖೇದಕರ. ಲಿಂಗಧಾರಣೆ ಮತ್ತು ಲಿಂಗಪೂಜೆ ಮಾಡದವರು ಲಿಂಗಾಯತ ಮತ್ತು ಬಸವಣ್ಣ ಅವರ ಬಹು ಪಾಂಡಿತ್ಯ ಪಡೆದವರಂತೆ ಬಿಂಬಿಸುವುದರ ಜೊತೆಗೆ ಸಮಾಜಕ್ಕೆ...

27 ಫೆಬ್ರವರಿ, 2024

ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಹೆಸರಿಡುವ ಅಭ್ಯಾಸ ನಿಂತೇ ಹೋಗಿದೆ. ಕನ್ನಡದಲ್ಲಿ ಇಡಲು ಮುದ್ದಾದ ಹೆಸರುಗಳು ಇವೆಯಾ?

ಅಚ್ಚ ಕನ್ನಡದ ಹೆಸರುಗಳಿಗೆ ಲಿಂಗ ಭೇದವಿಲ್ಲ, ಹಾಗಾಗಿ ಈ ಹೆಸರುಗಳು ನೀವು ಗಂಡು ಮಗುವಿಗೂ ಆದ್ರೂ ಇಡಬಹುದು, ಹೆಣ್ಣು ಮಗುವಿಗಾದ್ರೂ ಇಡಬಹುದು.ಇನ್ನು ಇದ್ದರೆ ಹಂಚಿಕೊಳ್ಳಿ. ನಿಮಗೆ ತಿಳಿದಿರುವ ಅಚ್ಚುಕನ್ನಡದ ಹೆಸರನ್ನು ತಪ್ಪದೆ ಕಾಂಮೆಂಟ ಮಾಡಿ. ಇಬ್ಬನಿ - morning dewಇನಿಪು - sweetಇನಿಯ - loverನಲ್ಲ - loverಮುಗಿಲ್ - cloudಅರಿಲ್ - starಲವಿಕೆ > ಲವಿಕಾ - activeಹಿರಿಲ್ - mightyನೈದಿಲೆ - white lotusಕಣ್ಮಣಿ - a person or thing that is loved and admired.ಅರಗಿಣಿ - royal parrot, cute child.ಅಚ್ಚರಿ - surpriseಮಿನುಗು - shineನುಡಿ - languageಕನಸು - dreamಕನವು - dreamನಲುಮೆ - loveಸಿಡಿಲ್ - thunderboltಇಂಪು - pleasant to hearಇಂಪನ - musicಕಂಪು - sweet/pleasant smell, fragrance >ಕಂಪನಪುಟ - pageಇಂಚರ - cuckoo, melodious...

05 ಫೆಬ್ರವರಿ, 2024

ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ: ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು, ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವದಿಲ್ಲ

ಅಥಣ: ನಮ್ಮ ದೇಶವನ್ನ ಈ ಮೊದಲು ಇಂಗ್ಲೆಂಡಿನ ಪಾರ್ಲಿಮೆಂಟ್‌ನಲ್ಲಿ ಕುಳಿತು ಹಾವಾಡಿಗರ ದೇಶವೆಂದು ಮೂದಲಿಸುತ್ತಿದ್ದರು. ಈಗ ಅದೇ ದೇಶದ ಪ್ರಧಾನಿ ನಮ್ಮ ಭಾರತಿಯರು ಎನ್ನುವ ಹೆಮ್ಮೆ ನಮ್ಮೆದು ಭಾರತ ಬೆಳೆಗುತ್ತಿದೆ. ವಿಶ್ವಗುರುವಾಗುವತ್ತ ಧಾಪುಗಾಲು ಹಾಕಿದೆ ಇದಕ್ಕೆ ಕಾರಣ ನಮ್ಮ ಶಿಕ್ಷಣ, ಸಂಸ್ಕಾರ,ಸಂಸ್ಕೃತಿಯ ಆಧ್ಯಾತ್ಮದ ಗಟ್ಟಿಬೇರು ಎಂದು ಶೇಗುಣಿಸಿಯ ಶ್ರೀ ಮನ್.ನಿರಂಜನ.ಪ್ರನವ ಸ್ವರೂಪಿ ಡಾ.ಮಹಾಂತ ಪ್ರಭು ಸ್ವಾಮಿಜಿ ಹೇಳಿದರು. ಅವರು ರವಿವಾರ 4ರಂದು ಸಂಕೊನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಾ ನಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ಅಧಿಕವಾಗಿದೆ ಶಿಕ್ಷಣಕ್ಕೆ ಆದ್ಯತೆ ಹೆಚ್ಚಿನ ನೀಡಲಾಗಿದೆ ಅದರಂತೆ ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು ಆದರೆ ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವದಿಲ್ಲ ಅಹಿಂಸಾ ತತ್ವ ಇಟ್ಟುಕೊಂಡು ಚಿಂತನೆ ಮಾಡಿದವರು ಬುದ್ಧ,...

23 ಡಿಸೆಂಬರ್, 2023

ರಜತ ಮಹೋತ್ಸವಕ್ಕೆ ಭರ್ಜರಿ ತಯಾರಿ.

1989ರಲ್ಲಿ ಕೇವಲ ಹತ್ತು ಜನ ಸೇರಿ ಅಥಣಿ ತಾಲೂಕಿನ ಸಂಕೋನಟ್ಟಿ ಮತ್ತು  ನಂದಗಾಂವದಲ್ಲಿ ನಿರ್ಮಾಣ ಆದ ಸಂಸ್ಥೆ ವರ್ಧಮಾನ ಶಿಕ್ಷಣ ಸಂಸ್ಥೆಯು 35ವರ್ಷಗಳನ್ನು ಪೂರೈಸಿದ್ದಕ್ಕೆ. ಈ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ಸೇರಿ ಬರುವ ವರ್ಷ 2024 ಫೆಬ್ರವರಿ ತಿಂಗಳ 9, ರಿಂದ 11ವರೆಗೆ  ರಜತ  ಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದು. ಇದರ ಪ್ರಯುಕ್ತ 1989 ರಿಂದ 2023ರ ವರೆಗೆ ಎಸ್ ಎಸ್ ಎಲ್ ಸಿ ಪಾಸಾಗಿರುವ ಎಲ್ಲಾ ಹಳೆಯ ವಿದ್ಯಾರ್ಥಿಗಳ ಇವತ್ತು ಶನಿವಾರ 12:00ಕ್ಕೆ ಸಂಕೋನಟ್ಟಿಯ ಹೈಸ್ಕೂಲ್ ಸಭಾಗೃಹದಲ್ಲಿ ಸಭೆ ಸೇರಿ ವಿವಿಧ ರೀತಿಯ ಚರ್ಚೆ ನಡೆಸಿದರು. ಈ  ಪೂರ್ವಭಾವಿ ಸಭೆಯಲ್ಲಿ  ಮುಖ್ಯೋಪಾಧ್ಯಾಯರಾದ ಲಡಗಿ   ಸರ್ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಅನಂತ್ ಬಸರಿಕೋಡಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ ಉಗಾರೆ ಈ ಪೂರ್ವಭಾವಿ  ಸಭೆಯಲ್ಲಿ ಉಪಸ್ಥಿತರಿದ್ದರು....

22 ನವೆಂಬರ್, 2023

ಬೇರೆ ಅಕೌಂಟ್ ಗೆ ಅಚಾನಕಾಗಿ ದುಡ್ಡು ಕಳಿಸಿದರೆ ಹಣವನು ಹಿಂಪಡೆಯುವುದು......!

ಬೇರೆ ಅಕೌಂಟ್ ಗೆ ಅಚಾನಕಾಗಿ ದುಡು ಕಳಿಸಿದರೆ ಹಣವನು ಹಿಂಪಡೆಯಲು, ಕೆಳಗಿನ ಹಂತಗಳನ್ನು ಅನುಸರಿಸಿ: ವ್ಯಕ್ತಿಗೆ ಸಂಪರ್ಕಿಸಿ. ಮೊದಲು, ನೀವು ಹಣ ಕಳಿಸಿದ ವ್ಯಕ್ತಿಗೆ ಸಂಪರ್ಕಿಸಿ ಮತ್ತು ನಿಮ್ಮ ತಪ್ಪು ತಿಳಿಸಿ. ಅವರು ನಿಮ್ಮ ಹಣವನ್ನು ಹಿಂಪಡೆಯಲು ಸಹಾಯ ಮಾಡಲು ಬಯಸುತ್ತಾರೆ ಎಂದು ಭಾವಿಸಲಾಗಿದೆ. ಬ್ಯಾಂಕ್ ಅನ್ನು ಸಂಪರ್ಕಿಸಿ. ವ್ಯಕ್ತಿಗೆ ಸಂಪರ್ಕಿಸಿದ ನಂತರ, ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ನಿಮ್ಮ ಬ್ಯಾಂಕ್ ನಿಮ್ಮ ಹಣವನ್ನು ಹಿಂಪಡೆಯಲು ಸಹಾಯ ಮಾಡಬಹುದು. ಹಣ ಪಾವತಿ ಮಾಡಲು ವ್ಯಕ್ತಿಯನ್ನು ಕೇಳಿ. ವ್ಯಕ್ತಿಯು ನಿಮ್ಮ ಹಣವನ್ನು ಹಿಂಪಡೆಯಲು ಬಯಸದಿದ್ದರೆ, ನೀವು ಅವರನ್ನು ಹಣವನ್ನು ಪಾವತಿ ಮಾಡಲು ಕೇಳಬಹುದು. ನೀವು ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಅವರಿಗೆ ತಿಳಿಸಬಹುದು. ಬ್ಯಾಂಕ್ ಅನ್ನು ಸಂಪರ್ಕಿಸಿದಾಗ, ನೀವು ಈ ಕೆಳಗಿನ ಮಾಹಿತಿಯನ್ನು ಒದಗಿಸಬೇಕು: ನಿಮ್ಮ ಬ್ಯಾಂಕ್...

Page 1 of 21123Next