Ts ads

03 ಆಗಸ್ಟ್, 2025

"ಈಗ ಹೇಗಿದ್ದೀರಿ?"

ಅವರಿವರ ಮಕ್ಕಳ ಶಿಕ್ಷಣಕ್ಕೆ ಶುಲ್ಕ ಪಾವತಿಸಿದ ಶ್ರೀಮಂತನಿಗೆ ತನ್ನ ಮಕ್ಕಳನ್ನು ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿ ಆಗಿಸಲು ಸಾಧ್ಯವಾಗಿರುವುದಿಲ್ಲ.

ಚಿನ್ನದ ತಾಳಿ ಇತ್ಯಾದಿ ಸಹಿತ ನೂರಾರು ಜೋಡಿಗೆ ಅದ್ಧೂರಿಯಾಗಿ ಸಾಮೂಹಿಕ ಮದುವೆ ಮಾಡಿಸುವ ಸಾಮರ್ಥ್ಯ ಇರುವಾತನ ಮಗ/ಮಗಳ ಸಂಸಾರವೇ ಸರಿ ಇರುವುದಿಲ್ಲ.


ಯಾರದ್ದೋ ಚಿಕಿತ್ಸೆಗೆ ಧನಸಹಾಯ ಮಾಡಿ ಜೀವ ಉಳಿಸುವವನಿಗೆ ಕಾಯಿಲೆ ಬಿದ್ದ ತನ್ನವರ ಜೀವವನ್ನು ಎಷ್ಟು ದುಡ್ಡಿದ್ದರೂ ಉಳಿಸಿಕೊಳ್ಳಲು ಆಗಿರುವುದಿಲ್ಲ. 


ನನ್ನಿಂದಲೇ ಅವನು ಹೀರೋ ಆದ ಸ್ಟಾರ್ ಆದ ಎಂದವನಿಗೆ ತನ್ನ ಮಗ/ಮಗಳನ್ನು ಸ್ಟಾರ್ ಆಗಿಸಲು ಆಗಿರುವುದಿಲ್ಲ.


ರಾಜ್ಯಕ್ಕೇ ಅಭಯ ನೀಡುವ ಭೀಷ್ಮ/ದ್ರೋಣನಂಥ ಅಜ್ಜನಿಗೂ ಮೊಮ್ಮಗ/ಮೊಮ್ಮಗಳಿಗೆ ನಾನಿದ್ದೇನೆ ಎಂದು ಧೈರ್ಯ ಹೇಳಿ ಉಳಿಸಿಕೊಳ್ಳಲು ಆಗಿರುವುದಿಲ್ಲ. 


ಒಂದು ಕಾಲದಲ್ಲಿ ಸೋತಿದ್ದ ವ್ಯಕ್ತಿ ಕೆಲವೇ ವರ್ಷಗಳಲ್ಲಿ ಭರ್ಜರಿ ಯಶಸ್ಸು ಗಳಿಸಿದ, ಒಂದು ಕಾಲದಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದ ವ್ಯಕ್ತಿ ಕೆಲವೇ ವರ್ಷಗಳಲ್ಲಿ ಸೋತು ಹೈರಾಣಾದ ಉದಾಹರಣೆಗಳು ಬೇಕಾದಷ್ಟಿವೆ. ಹಾಗೆಯೇ ಒಂದು ಕಾಲದ ಯಶಸ್ವಿ ವ್ಯಕ್ತಿ ಕೆಲವೇ ವರ್ಷಗಳಲ್ಲಿ ʼಇದೇನಾ ಯಶಸ್ಸು?ʼ ಎಂಬ ಹಂತಕ್ಕೆ ತಲುಪಿದ ನಿದರ್ಶನವೂ ಇದೆ.

 

ಯಾರದ್ದೇ ಆಗಿರಲಿ.. ಇಡೀ ಜೀವನವೇ ಯಶಸ್ವಿ ಆಗಿರುವುದಿಲ್ಲ. ಜೀವನದಲ್ಲಿ ಅವರು ಅಲ್ಲಲ್ಲಿ ಯಶಸ್ವಿ ಆಗಿರುತ್ತಾರಷ್ಟೇ. 


ಯಾರೇ ಆಗಲಿ.. ನಿನ್ನೆ ಹೇಗಿದ್ದ, ನಾಳೆ ಹೇಗಿರುತ್ತಾನೆ ಎಂಬುದು ಈ ಜಗತ್ತಿಗೆ ಮುಖ್ಯವೇ ಅಲ್ಲ. ಅವನು ಈಗ ಹೇಗಿದ್ದಾನೆ ಎಂದಷ್ಟೇ ಈ ಪ್ರಪಂಚ ನೋಡುತ್ತಿರುತ್ತದೆ.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ