Ts ads

08 ಜುಲೈ, 2025

|| ಧರ್ಮ ಸಂಸ್ಥಾಪನಾರ್ಥಾಯ someಭವಾಮಿ ಯುಗೇ ಯುಗೇ ||

 || ಧರ್ಮ ಸಂಸ್ಥಾಪನಾರ್ಥಾಯ

ಸಂಭವಾಮಿ ಯುಗೇ ಯುಗೇ ||
ಭಗವಾನ್ ಕೃಷ್ಣ ಹೇಳಿದ್ದ ಈ ಮಾತನ್ನು ಅದೆಷ್ಟೋ ಜನರು ಯಾವ ರೀತಿ ನಂಬಿಕೊಂಡಿದ್ದಾರೆಂದರೆ, "ಏನಾದರೂ ಕೆಡುಕಾದರೆ ಕೃಷ್ಣನೇ ಮತ್ತೆ ಅವತರಿಸಿ ಬಗೆಹರಿಸುತ್ತಾನೆ" ಅನ್ನೋವಷ್ಟರ ಮಟ್ಟಿಗೆ. ಆದರೆ ಕೃಷ್ಣ ಇನ್ನೊಂದು ಮಾತನ್ನೂ ಹೇಳಿದ್ದ, "ಎಲ್ಲರೊಳಗೂ ನಾನಿದ್ದೇನೆ" ಅಂತ.
ಅಷ್ಟಕ್ಕೂ ಧರ್ಮ ಸಂಸ್ಥಾಪನೆ ಎಂದರೆ ಏನು? ಧರ್ಮ‌ ಸಂಸ್ಥಾಪನೆ ಎಂದರೆ ಯಾವುದೋ ಒಂದು ಧಾರ್ಮಿಕ ಪದ್ಧತಿಯವರು ಇನ್ನೊಂದು ಧಾರ್ಮಿಕ ಪದ್ಧತಿಯವರ ವಿರುದ್ಧ ಹೋರಾಡುವುದಲ್ಲ. ಅದು ಇನ್ನೊಂದು ಧಾರ್ಮಿಕ‌ ಪದ್ಧತಿಯ ವಿರುದ್ಧದ ಹೋರಾಟವೇ ಆಗಿದ್ದಿದ್ದರೆ ಕೃಷ್ಣ ಯಾಕೆ ಹಿಂದೂಗಳೇ ಆಗಿದ್ದ ಕೌರವರ ವಿರುದ್ಧ ಹೋರಾಡಿದ?!
ಧರ್ಮ ಸಂಸ್ಥಾಪನೆ ಎಂದರೆ ಕೃಷ್ಣನೇ ತೋರಿಸಿಕೊಟ್ಟಿರುವ ಪ್ರಕಾರ ಅದು ಕೆಡುಕಿನ ವಿರುದ್ಧದ ಹೋರಾಟ. ಆ ಕೆಡುಕು ನಮ್ಮೊಳಗಿರುವುದೇ ಆಗಿರಲಿ, ನಮ್ಮವರದ್ದೇ ಆಗಿರಲಿ ಅಥವಾ ಇನ್ಯಾರದ್ದೇ ಆಗಿರಲಿ. ಯಾರು ಕೆಟ್ಟದ್ದರ ವಿರುದ್ಧ ಹೋರಾಡುತ್ತಾರೋ ಅದೇ ಧರ್ಮ ಸಂಸ್ಥಾಪನೆ. ಇದು ಮೊದಲು ನಮ್ಮೊಳಗಿನಿಂದಲೇ ಆಗಬೇಕು. ಈ ಕಾರಣಕ್ಕೇ ಕೌರವರ ವಿರುದ್ಧ ಹೋರಾಡುವ ಮೊದಲು ನಿನ್ನ ದೌರ್ಬಲ್ಯದ ವಿರುದ್ಧ ಹೋರಾಡು ಅಂತ ಅರ್ಜುನನಿಗೆ ಕೃಷ್ಣ ಉಪದೇಶ ಮಾಡಿದ್ದು.

ಮೊದಲು ನಮ್ಮೊಳಗಿನ ಕೆಟ್ಟ ಯೋಚನೆ, ಕೆಟ್ಟ ಭಾವನೆಗಳ ವಿರುದ್ಧ ನಾವು ಹೋರಾಡಬೇಕು. ಇದೇ ನಿಜವಾದ ಧರ್ಮ ಸಂಸ್ಥಾಪನೆ. ಯಾವ ಯುಗದಲ್ಲೇ ಆಗಲಿ, ಹುಟ್ಟಿದ ಎಲ್ಲರೂ ತಮ್ಮೊಳಗಿನ ಕೆಟ್ಟದ್ದರ ವಿರುದ್ಧ ತಾವೇ ಮೊದಲು ಹೋರಾಡಬೇಕು ಅನ್ನೋದೇ "ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" ಎನ್ನುವುದರ ಅರ್ಥ. ನಾವೀಗ ಇಲ್ಲಿದ್ದೇವೆ ಎಂದರೆ ಈ ಯುಗದಲ್ಲಿ ಹುಟ್ಟಿದ್ದೇವೆ ಹಾಗೂ ನಮ್ಮೊಳಗೂ ಕೃಷ್ಣ ಇದ್ದಾನೆ ಎಂದೇ ಅರ್ಥ ಮತ್ತು ನಾವು ನಮ್ಮೊಳಗಿನ ಒಂದು ಕೆಡುಕಿನ ವಿರುದ್ಧ ಹೋರಾಡಿದ್ದೇವೆ ಎಂದರೆ ಅದೇ ಒಂದು ಧರ್ಮ ಸಂಸ್ಥಾಪನೆ. ಈಗ ಈ‌ ಕ್ಷಣ ನಮ್ಮಲ್ಲಿರುವ ಒಂದು ಕೆಟ್ಟ ಯೋಚನೆ/ಭಾವನೆಯ ವಿರುದ್ಧ ಹೋರಾಡೋಣ, ಆಗಿಬಿಡಲಿ "ಧರ್ಮ someಸ್ಥಾಪನೆ".


0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ