ಭಾರಿ ಯಶಸ್ಸು ಬೇಕಾಗಿದೆ..
ನನಗಷ್ಟೇ ಅಲ್ಲ.. ಎಲ್ಲರಿಗೂ..
ಒಂದು ಭರ್ಜರಿ ಯಶಸ್ಸು ಬೇಕಾಗಿದೆ..
ನನ್ನ ಉದ್ಯಮದಲ್ಲಿ ಭಾರಿ ಯಶಸ್ಸು ಬೇಕಾಗಿದೆ,
ಅದಕ್ಕಾಗಿ ತುಂಬಾ ಗ್ರಾಹಕರು ನನಗೆ ಬೇಕಾಗಿದ್ದಾರೆ;
ಸಿನಿಮಾದಿಂದ ನನಗೆ ಭರ್ಜರಿ ಯಶಸ್ಸು ಬೇಕಾಗಿದೆ,
ಅದಕ್ಕಾಗಿ ನನಗೆ ತುಂಬಾ ಪ್ರೇಕ್ಷಕರು ಬೇಕಾಗಿದ್ದಾರೆ;
ನನ್ನ ಹೋಟೆಲ್ ತುಂಬಾ ಫೇಮಸ್ ಆಗಬೇಕಾಗಿದೆ,
ಅದಕ್ಕಾಗಿ ನನಗೆ ತುಂಬಾ ಕಸ್ಟಮರ್ಸ್ ಬೇಕಾಗಿದ್ದಾರೆ;
ನನ್ನ ಪ್ರೊಡಕ್ಟ್ ಬಹಳ ಪಾಪ್ಯುಲರ್ ಆಗಬೇಕಾಗಿದೆ,
ಅದಕ್ಕಾಗಿ ನನಗೆ ತುಂಬಾ ಯೂಸರ್ಸ್ ಬೇಕಾಗಿದ್ದಾರೆ;
ನನ್ನ ಬ್ಲಾಗ್ ಗೆ ತುಂಬಾ ವ್ಯೂಸ್ ಬರಬೇಕಾಗಿದೆ,
ಅದಕ್ಕಾಗಿ ನನಗೆ ಬಹಳ ಸಬ್‌ಸ್ಕ್ರೈಬರ್ಸ್ ಬೇಕಾಗಿದ್ದಾರೆ;
ನನ್ನ ಚಾನೆಲ್‌ಗೆ ತುಂಬಾ ಟಿಆರ್‌ಪಿ ಬರಬೇಕಾಗಿದೆ,
ಅದಕ್ಕಾಗಿ ನನಗೆ ಸಿಕ್ಕಾಪಟ್ಟೆ ವ್ಯೂವರ್ಸ್ ಬೇಕಾಗಿದ್ದಾರೆ;
ನನ್ನ ಪೋಸ್ಟ್ ತುಂಬಾ ವೈರಲ್ ಆಗಬೇಕಾಗಿದೆ,
ಲೈಕ್-ಶೇರ್ ಮಾಡುವವರು ತುಂಬಾ ಬೇಕಾಗಿದ್ದಾರೆ;
ನಾನು ನೆಚ್ಚಿನ ಕವಿ-ಸಾಹಿತಿ ಅನಿಸಿಕೊಳ್ಳಬೇಕಾಗಿದೆ,
ಕೊಂಡು ಓದುವ ಹಲವಾರು ಮಂದಿ ಬೇಕಾಗಿದ್ದಾರೆ;
ನನಗೆ ತುಂಬಾ ಜನಪ್ರಿಯತೆ ಬರಬೇಕಾಗಿದೆ,
ನನ್ನನ್ನು ಮೆಚ್ಚುವವರು ತುಂಬಾ ಬೇಕಾಗಿದ್ದಾರೆ;
ಏನೇ ಮಾಡಿದರೂ ಸೈ ಅನಿಸಿಕೊಳ್ಳಬೇಕಾಗಿದೆ,
ಮಾಡಿದ್ದನ್ನೆಲ್ಲ ಒ(ಅ)ಪ್ಪುವವರು ತುಂಬಾ ಬೇಕಾಗಿದ್ದಾರೆ;
ನಾನು ದೊಡ್ಡ ಇನ್‌ಫ್ಲುಯೆನ್ಸರ್ ಆಗಬೇಕಾಗಿದೆ,
ಅದಕ್ಕಾಗಿ ನನಗೆ ತುಂಬಾ ಫಾಲೋವರ್ಸ್ ಬೇಕಾಗಿದ್ದಾರೆ;
ನಾನು ದೊಡ್ಡ ನಾಯಕನಾಗಬೇಕಾಗಿದೆ,
ಅದಕ್ಕಾಗಿ ತುಂಬಾ ಅನುಯಾಯಿಗಳು ಬೇಕಾಗಿದ್ದಾರೆ;
ಈ ಎಲ್ಲದಕ್ಕೂ ಜನರೇ ಬೇಕಾಗಿದ್ದಾರೆ..
ಏನು ಮಾಡೋಣ..
ನಮಗೆ ಜನಸಂಖ್ಯೆಯೇ ಸಮಸ್ಯೆಯಾಗಿದೆ..🤔
0 comments:
ಕಾಮೆಂಟ್ ಪೋಸ್ಟ್ ಮಾಡಿ