Ts ads

24 ಸೆಪ್ಟೆಂಬರ್, 2022

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ : ಯುಜಿಸಿ ನೆಟ್ ಪರೀಕ್ಷೆ

26 ಸೆಪ್ಟಂಬರ್ 2022 ರಿಂದ ಯುಜಿಸಿ ನೆಟ್ ಪರೀಕ್ಷೆ ಪ್ರಾರಂಭವಾಗಲಿದ್ದು ಆದಕಾರಣ ಸ್ನಾತಕೋತರ ಎರಡನೆಯ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಿಲ್ಪಟ್ಟಿವೆ.


ಇನ್ನೇನ ಎರಡ - ಮೂರು ದಿನ ಕಳೆದರೆ ಸ್ನಾತಕೋತ್ತರ ಪದವಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು  ದಿಡೀರನೆ ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆ ಮಾಡಲು ಮುಂದಾದರು ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಪ್ರತಿಭಟನೆ ನಿನ್ನೆಯಿಂದ ಪ್ರಾರಂಭವಾಗಿತ್ತು 26 ಸೆಪ್ಟಂಬರ್ 2022 ರಿಂದ ಯುಜಿಸಿ ನೆಟ್ ಪರೀಕ್ಷೆ ಪ್ರಾರಂಭವಾಗಲಿದ್ದು ಆದಕಾರಣ ಸ್ನಾತಕೋತರ ಪರೀಕ್ಷೆಗಳನ್ನು ಮುಂದಕ್ಕೆ ಹಾಕಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ ಆದಕಾರಣ ವಿಶ್ವವಿದ್ಯಾಲಯದಿಂದ ನಡೆಯಲಿರುವ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲು ಅಧಿಸೂಚನೆ ಹೊರಡಿಸಿದ್ದೇವೆ ಎಂದು ವಿಶ್ವವಿದ್ಯಾಲಯ ಸಬೂಬು ನೀಡಿತು.
ಆದರೆ ಮುಖ್ಯ ಕಾರಣ ಬೇರೆಯೇ ಇದೆ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ  ಹಿಂದುಳದ ವರ್ಗ / ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮೊತ್ತವು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಸಂದಾಯವಾಗಿರುವುದರಿಂದ, ಪ್ರವೇಶಾತಿ ಸಂದರ್ಭದಲ್ಲಿ ನೀಡಿರುವ ಶುಲ್ಕ ವಿನಾಯತಿಯ ಮೊತ್ತವನ್ನು ಮರು ಭರಣಾ ಮಾಡಬೇಕೆಂದು ಹೇಳಿ ಅನಿಸೂಚನೆಯನ್ನು ಹೊರಡಿಸಿತ್ತು ಹಾಗೂ ದಿನಾಂಕ: 26-09-2022ವರೆಗೆ ಗಡುವು ನೀಡಲಾಗಿತ್ತು.  ಹೆಚ್ಚುವರಿ ಶುಲ್ಕ ವಿಧಿಸುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರಮದ ವಿರುದ್ಧ ಶನಿವಾರ ವಿವಿಧ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಳೆದ 3 ವರ್ಷಗಳಿಂದ ಶಿಷ್ಯ ವೇತನ ಸರಿಯಾಗಿ ಪಾವತಿಯಾಗಿಲ್ಲವೆಂದು ಹೇಳಿ. ಹೆಚ್ಚುವರಿ ಹಣ ಪಾವತಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು

ವಿದ್ಯಾರ್ಥಿಗಳ ಮನವೊಲಿಸಲು ಬಂದ ರಿಜಿಸ್ಟರ್ ಗೆ ಹಿಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು ರಾಜ್ಯದಲ್ಲಿ ಯಾವ ವಿಶ್ವವಿದ್ಯಾಲಯದಲ್ಲಿಯೂ ಇಲ್ಲದ ನಿಯಮ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಏಕೆ ಇದೆ ಇದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲ ಸಚಿವ ಬರುವವರೆಗೂ ಯಾವುದೇ ಕಾರಣಕ್ಕೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಉಗ್ರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ದಿನಗಳಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಡಳಿತ ಕಚೇರಿ ಮುಂಭಾಗ ಎಡಬಿಡದೆ ಧರಣಿ ನಡೆಸಿ ವಿದ್ಯಾರ್ಥಿಗಳ ಪರೀಕ್ಷೆ ಸಮೀಪ ಬರುತ್ತಿರುವ ವಾಗ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸುತ್ತೋಲೆಗಳನ್ನು ಕಳುಹಿಸಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ಬರಿಸುವಂತೆ ಹೇಳಲಾಗುತ್ತಿದೆ ಎಂದು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ಧ ಕೆಂಡಮಂಡಲ ರಾಗಿ ಆಡಳಿತ ಕಚೇರಿಗೆ ಬೀಗ ಜಡಿದು ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳ ಅನಾವಶ್ಯಕ ಹೆಚ್ಚುವರಿ ಶುಲ್ಕವನ್ನು ಬರಿಸುವಂತೆ ಹೊರಡಿಸಿದ ಸುತ್ತೋಲೆಯನ್ನು ಹಿಂಪಡೆಯಬೇಕು ಹಾಗೂ ಪ್ರಸ್ತುತ ಯುಜಿಸಿ ನೆಟ್ ಪರೀಕ್ಷೆ ಇರುವ ಕಾರಣ 27 ರಿಂದ ನಡೆಸಲು ಯೋಜನೆ ರೂಪಿಸಿದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂದು ಬೇಡಿಕೆ ಮುಂದಿಟ್ಟರು.


0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ