Ts ads

26 ಸೆಪ್ಟೆಂಬರ್, 2022

ಕರ್ನಾಟಕ ಸರ್ಕಾರವು NSE ಅಕಾಡೆಮಿ ಸಹಯೋಗದಲ್ಲಿ ಎರಡನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಕೋರ್ಸ್ಅನ್ನು ಪರಿಚಯಿಸುತ್ತಿದೆ

ಕರ್ನಾಟಕ ಸರ್ಕಾರವು ಎರಡನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ಹೂಡಿಕೆ ಜಾಗೃತಿ ಎಂಬ ಹೊಸ ವಿಷಯವನ್ನು ಪರಿಚಯಿಸಲು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ NSE ಜೊತೆಗೆ MoU ಮಾಡಿಕೊಂಡಿದೆ.


ಕರ್ನಾಟಕ ಸರ್ಕಾರವು ಎರಡನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ಹೂಡಿಕೆ ಜಾಗೃತಿ ಎಂಬ ವಿಷಯವನ್ನು ಪರಿಚಯಿಸುತ್ತಿದೆ ಉತ್ತಮ ಹಣಕಾಸು ನಿರ್ವಹಣೆ ಅಭ್ಯಾಸಗಳ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಜ್ಞಾನ ನೀಡಲು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ ಪ್ರಸ್ತುತ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಲಿರುವ ಎರಡನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ.

KSHEC ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯ ಬೆಳಗಾವಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಅಕಾಡೆಮಿ ಹಾಗೂ ರಾಣಿ ಪಾರ್ವತಿ ದೇವಿ ಪದವಿ ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯ ಬೆಳಗಾವಿ ಸಹಯೋಗದಲ್ಲಿ. 26 ಮತ್ತು 27 ಸೆಪ್ಟೆಂಬರ್ 2022 ರಂದು ಎರಡು ದಿನಗಳ ಕಾಲ ಶಿಕ್ಷಕರಿಗೆ ಓರಿಯಂಟೇಶನ್ ಪ್ರೋಗ್ರಾಮ್ ನಡೆಯುತ್ತಿದೆ.

ಪ್ರತಿಯೊಬ್ಬರಿಗೂ ಹಣಕಾಸಿನ ನಿರ್ಧಾರ ಕೈಗೊಳ್ಳುವ ಮೂಲಭೂತ ಹಕ್ಕು ಇರುವುದು ಮತ್ತು ಅದರ ಬಗ್ಗೆ ಅಭ್ಯಾಸ ಮಾಡುವುದು ಜನರಿಗೆ ವಿವಿಧ ಉಳಿತಾಯ ಮತ್ತು ಹೂಡಿಕೆಯ ಪರ್ಯಾಯಗಳ ಬಗ್ಗೆ ಮಾಹಿತಿ ನೀಡುವುದು ಶೇರು ವಿನಿಮಯ ಮಾರುಕಟ್ಟೆಗಳು ಬಗ್ಗೆ ವಿವರವಾಗಿ ಅವಲೋಕನ ನೀಡುವುದು ಮತ್ತು ಮ್ಯೂಚುವಲ್ ಫಂಡ್ ಗಳ ಆಯ್ಕೆಗಳ ಮಾನದಂಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಲು ಈ ವಿಷಯದ ಮುಖ್ಯವಾದ ಗುರಿಯಾಗಿದೆ
NSE ಅಕಾಡೆಮಿ ಕಾಲೇಜು ಶಿಕ್ಷಕರಿಗೆ ಕಲಿಕೆಯ ಅಗತ್ಯವಾಗುವ ಕೌಶಲ್ಯಗಳನ್ನು ರಾಜ್ಯಾದ್ಯಂತ ಟ್ರೇನ್ ದಿ ಟ್ರೈನರ್ ಎಂಬ ಕಾರ್ಯಕ್ರಮಗಳ ಮೂಲಕ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಎನ್ಎಸ್ಇ ಅಕಾಡೆಮಿಯ ಜೊತೆ ಸೇರಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸಿಎನ್ ಅವರ ಸಮ್ಮುಖದಲ್ಲಿ ತಿಳುವಳಿಕೆ(MoU) ಪತ್ರಕ್ಕೆ ಜುಲೈ ತಿಂಗಳ 12ರಂದು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರ ಸಮ್ಮುಖದಲ್ಲಿ ಸಹಿ ಮಾಡಿ ವಿನಿಮಯ ಮಾಡಿಕೊಳ್ಳಲಾಗುವುದು.ಈ ಕಾರ್ಯಕ್ರಮದ ಪ್ರಯೋಜನವನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪದವಿ ಶಿಕ್ಷಕರು ಪಡೆದುಕೊಳ್ಳಬೇಕು.ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ವಿಶೇಷ ಅಧಿಕಾರಿ ಡಾ.ಜಯಪ್ಪ ಎಂ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಾಡುವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಎರಡನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಕೋರ್ಸ್ ಒಂದು ಉತ್ತಮ ಆರ್ಥಿಕ ಜ್ಞಾನವನ್ನು ನೀಡುವ ಮತ್ತು ಹಣಕಾಸು ನಿರ್ವಹಣಾ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಎಲ್ಲಾ ಸ್ಟ್ರೀಮ್ ಗಳ ವಿದ್ಯಾರ್ಥಿಗಳಿಗೆ ಅದರ ಕಲಿಕೆಯ ಅನುಭವ ಹೊಂದಲು ಮತ್ತು ಹಣಕಾಸು ಜ್ಞಾನದ ಸಬಲೀಕರಣ ಗೊಳಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮದಲ್ಲಿ ಈ ಕೋರ್ಸ್ ಅನ್ನು ಸಂಯೋಜಿಸುವ ನಿರೀಕ್ಷೆ ಇದೆ ಅಕ್ಟೋಬರ್ ತಿಂಗಳಿಂದ ಪ್ರಾರಂಭವಾಗುವ ಶೈಕ್ಷಣಿಕ ವರ್ಷ ಈ ಕೋರ್ಸ್ ವಾರ್ಷಿಕವಾಗಿ 5 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಈ ಕೋರ್ಸ್ ಅನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಉಳಿತಾಯ ಮತ್ತು ಹೂಡಿಕೆಯ ಮನೋಭಾವ ಆರ್ಥಿಕ ಹೂಡಿಕೆಗಳ ವಿವಿಧ ಮಾರ್ಗಗಳನ್ನು ಅಭ್ಯಾಸ ಜ್ಞಾನವನ್ನು ವೃದ್ಧಿಗೊಳಿಸುವ ಗುರಿಯನ್ನು ಹೊಂದಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ ರಾಮಚಂದ್ರಗೌಡ ಅವರು ಮಾತನಾಡಿ ಆರ್ಥಿಕ ಶಿಕ್ಷಣದ ಮಹತ್ವವನ್ನು ತಿಳಿಸುವ ಕೋರ್ಸ್ ಇದಾಗಿದೆ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣವು ಆರ್ಥಿಕ ಅರಿವು ಉತ್ತಮ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳುವ ಆರ್ಥಿಕ ಸ್ವಾತಂತ್ರ್ಯ, ಆರ್ಥಿಕ ಯೋಗ ಕ್ಷೇಮ, ಒಟ್ಟಾರೆಯಾಗಿ ಜೀವನವನ್ನು ಸುಗಮ ರೀತಿಯಲ್ಲಿ ಸಾಗಿಸಲು ಬೇಕಾಗುವ ಎಲ್ಲ ರೀತಿಯ ಹಣಕಾಸಿಗೆ ಸಂಬಂಧಪಟ್ಟ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ದೃಷ್ಟಿಯಲ್ಲಿ ಈ ವಿಷಯವು ಸಹಕಾರಿಯಾಗಲಿದೆ ಎಂದು ಹೇಳಿದರು.

ಕೋರ್ಸ್‌ನ ವಿಷಯವು ಹಣಕಾಸು, ಹೂಡಿಕೆ ನಿರ್ವಹಣೆ, ಮ್ಯೂಚುಯಲ್ ಫಂಡ್‌ಗಳು ಮತ್ತು ಹಣಕಾಸು ಯೋಜನೆ ಅಗತ್ಯತೆಗಳ ಅಡಿಪಾಯಗಳಲ್ಲಿ ವ್ಯವಹರಿಸುತ್ತವೆ. 

ಈ ವಿಷಯದಲ್ಲಿ ಶಿಕ್ಷಣವು ಹಣಕಾಸಿನ ಮಹತ್ವ ತಿಳುವಳಿಕೆಯನ್ನು ಪ್ರೇರೇಪಿಸುತ್ತದೆ ಹಾಗೂ ವಿಷಯವನ್ನು ಕಲಿಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಹೇಗೆ ಎಂದು ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಹಣಕಾಸಿನ ವಂಚನೆಗಳ ವಿರುದ್ಧ ಹೋರಾಡಲು ಆರ್ಥಿಕ ಶಿಕ್ಷಣವೂ ಪ್ರಮುಖವಾದ ಹೆಜ್ಜೆ ಇಡುತ್ತಿದೆ ಎಂದು ಹೇಳಬಹುದು.


0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ