Ts ads

05 ಅಕ್ಟೋಬರ್, 2022

ಭಾರತದಲ್ಲಿ ಪ್ರಾಮಾಣಿಕ ಮತ್ತು ನೈತಿಕತೆಯ ರಾಜಕಾರಣಿ.

ಈಗಿನ ದಿನದಲ್ಲಿ ಒಬ್ಬ ಪ್ರಾಮಾಣಿಕ ರಾಜಕಾರಣಿಯನ್ನು ಹೊಂದುವುದಂದರೆ ಸಮುದ್ರದಲ್ಲಿ ಮುತ್ತು ಹುಡುಕಿದಂತೆ ಹೌದು ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದರೆ ಯಾರಾದರೂ ಗ್ರಾಮ ಪಂಚಾಯಿತಿ ಸದಸ್ಯರಾದರೆ ಅಥವಾ ಕಾರ್ಪೊರೇಟರ್ ಆದರೆ ಶಾಸಕರಾದರೆ ಅವರ ಕಾಲು ನೆಲಕ್ಕೆ ತಾಗುವುದೇ ಇಲ್ಲ ಅನ್ನೋತರ ಯಾವಾಗಲೂ ಜೂನ್ ಜಾಮ್ ಆಗಿ ಅಕ್ಕಪಕ್ಕ ಹತ್ರ ಹತ್ರ 15 ಜನರನ್ನು ತಮ್ಮ ಬೆಂಬಲಿಗರ ಸಂಘಟ ಇರುವುದನ್ನು ನಾವು ಸಹಜವಾಗಿ ನೋಡಬಹುದು. ಆ ರೀತಿ ಆಡಂಬರದ ಜೀವನವನ್ನು ಪ್ರದರ್ಶಿಸಿ ಕಾರುಗಳಲ್ಲಿ ಅಶ್ವದಳಗಳೊಂದಿಗೆ ಜೊತೆಗೆ ಒಬ್ಬರು ಗನ್ ಮ್ಯಾನ್ ಹಿಂದೆ ಒಂದು ಕಾರು ಮುಂದೆ ಒಂದು ಕಾರು ಇರುತ್ತದೆ.

ಆದರೆ ಒಬ್ಬ ಪ್ರಾಮಾಣಿಕ ಮತ್ತು ನೈತಿಕತೆಯ ರಾಜಕಾರಣಿ ಸಿಗುವುದು ತುಂಬಾ ವಿರಳ ಮತ್ತು ಪರಿಸರ ವಿಜ್ಞಾನದ ಬಗ್ಗೆಯೂ ಯೋಚಿಸಬೇಕು. ಆದರೆ ಈ ಬಿಕಾನೇರ್‌ನ ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಘವಾಲ್ ಈ ಅಪವಾದದಿಂದ ದೂರವಿದ್ದಾರೆ, ಅವರು ನಿವೃತ್ತ ಐಎಎಸ್ ಅಧಿಕಾರಿ ಮತ್ತು ಅತ್ಯುತ್ತಮ ಸಂಸದೀಯ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.
ಅವರು ಅನೇಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಇದಲ್ಲದೆ ಅವರು ಗಾಯನ ಗಾಯಕರಾಗಿದ್ದಾರೆ ಮತ್ತು ವಾದ್ಯಗಳನ್ನು ನುಡಿಸುತ್ತಾರೆ ಮತ್ತು ಭಜನೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ರಾಜಶಾಸ್ತ್ರ ವಿಷಯದಲ್ಲಿ ಶ್ನಾತಕೋತರ ಅಧ್ಯಯನ ಮಾಡಿದ್ದಾರೆ ಜೊತೆಗೆ ಕಾನೂನು ಪದವಿದರರು ಹಾಗೂ ಎಂಬಿಎ ಪದವಿಗಳನ್ನು ಪಡೆದಿದ್ದಾರೆ. ಮತ್ತು ಭಾರತದ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಮನೋಹರ್ ಪರಿಕ್ಕರ್, ತರುಣ್ ವಿಜಯ್, ಜೈ ಪ್ರಕಾಶ್ ಅವರಂತೆ ತಮ್ಮ ಸ್ವಂತ ಶಕ್ತಿಯಲ್ಲಿ ಪ್ರಾಮಾಣಿಕ ಧೀಮಂತರು, ಅವರು ಅದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ತುಂಬಾ ಸಾಧಾರಣ ಮತ್ತು ಇಡೀ ಸಂಸತ್ ಭವನದಲ್ಲಿ ವಿರಳಲ್ಲಿ ವಿರಳ ವಿರೋಳ ಎನ್ನುವ ರೀತಿಯಲ್ಲಿ ಅವರು ತಮ್ಮ ಜೀವನ ಸಾಗಿಸುತ್ತಿದ್ದಾರೆ ದೆಹಲಿಯ ಸಂಸತ್ ಭವನಕ್ಕೂ ಎರಡು ಚಕ್ರದ ಸೈಕಲ್ ಮೇಲೆ ಆಗಮಿಸುತ್ತಾರೆ.
ಅವರ ಫೋಟೋ ಇಲ್ಲಿದೆ

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ