Ts ads

10 ಅಕ್ಟೋಬರ್, 2022

ಕುಲಸಚಿವರಾಗಿ ಕೆ.ಎ.ಎಸ್ ದರ್ಜೆಯ ಅಧಿಕಾರಿಯ ನೇಮಕ ಮಾಡಿ ಆದೇಶ ಹೊರಡಿಸಿ ಅಚ್ಚರಿ ಮೂಡಿಸಿದ ರಾಜ್ಯ ಸರ್ಕಾರ : ರಾಣಿ ಚನ್ನಮ್ಮ ವಿದ್ಯಾಲಯ ಬೆಳಗಾವಿ ನೂತನ ಕುಲಸಚಿವರು ಯಾರು ಎಂದು ತಿಳಿದುಕೊಳ್ಳಬೇಕೆ ಈ ಸ್ಟೋರಿ ನೋಡಿ.

ರಾಣಿ ಚನ್ನಮ್ಮ ವಿದ್ಯಾಲಯ ಬೆಳಗಾವಿ ನೂತನ ಕುಲಸಚಿವರಾಗಿ ಕೆ.ಎ.ಎಸ್ ದರ್ಜೆಯ ಅಧಿಕಾರಿಯ ನೇಮಕಾತಿ ಆದೇಶ ಹೊರಡಿಸಿದ ಕರ್ನಾಟಕ ರಾಜ್ಯ ಸರ್ಕಾರ. ಇಲ್ಲಿಯವರೆಗೆ ವಿಶ್ವವಿದ್ಯಾಲಯಗಳು ಕುಲಸಚಿವರನ್ನಾಗಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಗಳನ್ನು ಕುಲಸಚಿವರಾಗಿ ನೇಮಕ ಮಾಡಲಾಗುತ್ತಿತ್ತು.

ಈ ಹಿಂದೆ ಸಹಾಯಕ ನಿರ್ದೇಶಕರು ಆಡಳಿತ ವಿಭಾಗ  ರಷ್ಮೇ ಇಲಾಖೆ, ಬೆಂಗಳೂರು ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಕೆ.ಟಿ. ಶಾಂತಲ ಅವರನ್ನು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿಯ ಆಡಳಿತ ವಿಭಾಗ ಕುಲಸಚಿವರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. 
ಜೋತೆಗೆ  ಶ್ರೀ ಮಹೇಶ್ ಬಾಬು ಕೆ.ಎ.ಎಸ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. ಕುಲಸಚಿವರನ್ನಾಗಿ ಹಾಗೂ ಡಾ.ಬಿ.ಶರಣಪ್ಪ ಕೆ.ಎ.ಎಸ್ ಅವರನ್ನು ಕಲಬುರ್ಗಿ ವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ