Ts ads

05 ಫೆಬ್ರವರಿ, 2024

ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ: ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು, ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವದಿಲ್ಲ

ಅಥಣ: ನಮ್ಮ ದೇಶವನ್ನ ಈ ಮೊದಲು ಇಂಗ್ಲೆಂಡಿನ ಪಾರ್ಲಿಮೆಂಟ್‌ನಲ್ಲಿ ಕುಳಿತು ಹಾವಾಡಿಗರ ದೇಶವೆಂದು ಮೂದಲಿಸುತ್ತಿದ್ದರು. ಈಗ ಅದೇ ದೇಶದ ಪ್ರಧಾನಿ ನಮ್ಮ ಭಾರತಿಯರು ಎನ್ನುವ ಹೆಮ್ಮೆ ನಮ್ಮೆದು ಭಾರತ ಬೆಳೆಗುತ್ತಿದೆ. ವಿಶ್ವಗುರುವಾಗುವತ್ತ ಧಾಪುಗಾಲು ಹಾಕಿದೆ ಇದಕ್ಕೆ ಕಾರಣ ನಮ್ಮ ಶಿಕ್ಷಣ, ಸಂಸ್ಕಾರ,ಸಂಸ್ಕೃತಿಯ ಆಧ್ಯಾತ್ಮದ ಗಟ್ಟಿಬೇರು ಎಂದು ಶೇಗುಣಿಸಿಯ ಶ್ರೀ ಮನ್.ನಿರಂಜನ.ಪ್ರನವ ಸ್ವರೂಪಿ ಡಾ.ಮಹಾಂತ ಪ್ರಭು ಸ್ವಾಮಿಜಿ ಹೇಳಿದರು. ಅವರು ರವಿವಾರ 4ರಂದು ಸಂಕೊನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಾ ನಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ಅಧಿಕವಾಗಿದೆ ಶಿಕ್ಷಣಕ್ಕೆ ಆದ್ಯತೆ ಹೆಚ್ಚಿನ ನೀಡಲಾಗಿದೆ ಅದರಂತೆ ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು ಆದರೆ ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವದಿಲ್ಲ ಅಹಿಂಸಾ ತತ್ವ ಇಟ್ಟುಕೊಂಡು ಚಿಂತನೆ ಮಾಡಿದವರು ಬುದ್ಧ, ಮಹಾವೀರ, ಬಸವಣ್ಣನವರು ಅವರ ಜೀವನ ಚರಿತ್ರೆಗಳನ್ನ ಮಕ್ಕಳಿಗೆ ತಿಳಿಪಡಿಸುವುದು ಅಗತ್ಯವಾಗಿದೆ ಅದಕ್ಕೆ ಮಹಾತ್ಮಾ ಗಾಂಧೀಜಿಯವರು ಕಂಡ ಕನಸು ಗ್ರಾಮಗಳು ರಾಮರಾಜ್ಯವಾಗಬೇಕು ಗ್ರಾಮೀಣ ಜನರ ಬದುಕು ಹಸನಾಗಬೇಕು ಅದಕ್ಕೆ ಸಾಕ್ಷಿಯಾಗಿ ಸಂಕೊನಟ್ಟಿಯಲ್ಲಿರುವ ವರ್ಧಮಾನ ಶಿಕ್ಷಣ ಸಂಸ್ಥೆ ಮಾದರಿಯಾಗಿ ಬೆಳೆದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಮುಂದೆ ಶತಮಾನೊತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.


ಕಾರ್ಯಕ್ರಮ ಉದ್ಘಾಟನೆಯ ದಿವ್ಯ ಸಾನಿಧ್ಯವಹಿಸಿದ ನಾಂದಣಿ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ ಮಾತನಾಡಿ ನಮ್ಮ ಬದುಕಿನಲ್ಲಿ ಮೂರು ಜನ ಗುರುಗಳು ಇರುತ್ತಾರೆ ಅವರನ್ನ ಮರೆಯಬಾರದು ಮೊದಲನೆಯವರು ತಂದೆ-ತಾಯಿ,ನಂತರ ಶಿಕ್ಷಕರು- ಶಾಲೆ. ಆಮೇಲೆ ಆಧ್ಯಾತ್ಮ ಸನ್ಮಾರ್ಗ ತೊರುವ ಗುರುಗಳು ಎಂದರು. ಅದೇ ರೀತಿ ಸಸಿಯಾಗಿ ಬೆಳೆದು ವ್ಯಕ್ತವಾಗಿ ನಿಂತಿರುವ ವರ್ಧಮಾನ ಶಿಕ್ಷಣ ಸಂಸ್ಥೆ ಅದರ ಹೆಸರಿನಲ್ಲಿ ಇದೆ ವೃದ್ಧಿ, ಬೆಳವಣಿಗೆ ಕಂಡು ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಿ ದೇಶಕ್ಕೆ ಕೀರ್ತಿ ತರುವ ಮಕ್ಕಳಾಗಲಿ ಈ ಸಂಸ್ಥೆ ಸುವರ್ಣಮಹೋತ್ಸವ ಕಾಣುವಂತಾಗಲಿ ಎಂದರು.

ಅಥಣಿ ಸಮೀಪದ ಸಂಕೊನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಭೂದಾನ ಮಾಡಿದ ದುಂಡವ್ವಾ ಪರಪ್ಪ ಅಸ್ತಿ ಅವರನ್ನ ಸತ್ಕರಿಸಿದ ಪೂಜ್ಯರ ದೃಶ್ಯ. ಈ ವೇಳೆ ನಾಂದಣಿ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ ಶೇಗುಣಿಸಿಯ ಡಾ.ಮಹಾಂತಪ್ರಭು ಸ್ವಾಮಿಜಿ,ಶ್ರವಣಬೆಳಗೊಳದ ಜಗದ್ಗುರು ಸ್ವಸ್ತಿಶ್ರೀ ಮದಭಿನವರ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾಚಾರ ಪಟ್ಟಾಚಾರ್ಯ ಸ್ವಾಮಿಜಿ ಮತ್ತಿತರರು ಇದ್ದರು.

ಒಳ್ಳೆಯ ನಾಗರಿಕನ್ನಾಗಿ ರೂಪಿಸುವ ಜವಾಬ್ದಾರಿಯಿದೆ ದುಶ್ಚಟಗಳಿಂದ ದೂರ ಮಾಡಿ ಅವರಿಗೆ ಮಾನವೀಯ ಮೌಲ್ಯಗಳನ್ನ ತಿಳಿಪಡಿಸುವುದು ಮೊಬೈಲದಿಂದ ದೂರವಿರುವಂತೆ ಎಚ್ಚರವಹಿಸುವುದು ಪಾಲಕರ ಕರ್ತವ್ಯವಾಗಿದೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ಎಚ್ಚರವಹಿಸಬೇಕು ಎಂದರು.



ಪ್ರಾಸ್ತಾವಿಕವಾಗಿ ವರ್ಧಮಾನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸಿದ್ದಪ್ಪ ನಾಗನೂರ ಮಾತನಾಡಿ ರಜತ ಮಹೋತ್ಸವ ಆಚರಣೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸುಂದರ ಮೈದಾನ ನಿರ್ಮಿಸಿ, ಧ್ವಜ ಕಟ್ಟೆ, ಬಡ ವಿದ್ಯಾರ್ಥಿಗಳಿಗೆ ನಿಧಿ ಸಂಗ್ರಹಣೆ ಮಾಡಿ ತಮ್ಮ ಪ್ರೀತಿಯನ್ನ ಶಾಲೆಗೆ ಸಮರ್ಪಿಸಿದ್ದಾರೆ ಎಲ್ಲರ ಸಹಾಯ, ಸಹಕಾರದಿಂದ ಇಂತಹ ಕಾರ್ಯಕ್ರಮವಾಗಲು ಸಾಧ್ಯವಾಗಿದೆ ಎಂದರು.


ಸಮಾರಂಭದಲ್ಲಿ ವಿವಿಧ ದಾನಿಗಳನ್ನ ಸತ್ಕರಿಸಿದರು ಈ ವೇಳೆ ಶ್ರವಣಬೆಳಗೊಳದೆ ಜಗದ್ಗುರು ಸ್ವಸ್ತಿಶ್ರೀ ಮದಭಿನವರ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾಚಾರ ಪಟ್ಟಾಚಾರ್ಯ ಸ್ವಾಮಿಜಿ.ಮಾಜಿ ಸಚಿವ ವೀರಕುಮಾರ ಪಾಟೀಲ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ದಡ್ಡಿ, ಕಾರ್ಯಾಧ್ಯಕ್ಷ ಶ್ರೀಕಾಂತ ಅಸ್ತಿ. ಕೃಷ್ಣಾ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಗಣ್ಯರಾದ ಅರುಣಕುಮಾರ ಯಲಗುದ್ರಿ, ಅಪ್ಪಾಸಾಬ ನಾಡಗೌಡ ಪಾಟಿಲ, ಎ.ಸಿ.ಪಾಟೀಲ, ರಾಜೇಂದ್ರ ಪಾಟೀಲ, ಎ.ಬಿ.ಬಸರಿಕೊಡಿ, ವೆಂಕಣ ಬಳೊಜ, ಶಿವಾನಂದ ದಿವಾನಮಳ, ಬಸಪ್ಪ ಗುಮಟಿ, ಬಾಬುರಾವ ಲಡಗಿ ಇದ್ದರು. 



0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ