Ts ads

04 ನವೆಂಬರ್, 2022

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ನಾತಕೋತ್ತರ (ಪಿ ಜಿ) ಕೋರ್ಸುಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.

 

2022-23ನೇ ಶೈಕ್ಷಣಿಕ ಸಾಲಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮುಖ್ಯ ಆವರಣದ ಸ್ನಾತಕೋತ್ತರ ವಿಭಾಗಗಳು, ಸ್ನಾತಕೋತ್ತರ ಕೇಂದ್ರ ವಿಜಯಪುರ, ಜಮಖಂಡಿ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಲಭ್ಯವಿರುವ ಈ ಕೆಳಕಂಡ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (Through the UUCMS Online portal by the User link https://uucms.karnataka.gov.in) ವಿಶ್ವವಿದ್ಯಾಲಯದ ಭಾಗಗಳಲ್ಲಿ/ಸ್ನಾತಕೋತ್ತರ ಕೇಂದ್ರಗಳು/ಘಟಕ ಮಹಾವಿದ್ಯಾಲಯ / ಸಂಯೋಜಿತ ಕಾಲೇಜುಗಳಲ್ಲಿ ಲಭ್ಯವಿರುವ ಸ್ನಾತಕೋತ್ತರ.

ವಿಷಯಗಳು:

ಅ.ಕಲಾ ನಿಕಾಯ:

1 ಎಂ.ಎ: ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ, ಇಂಗ್ಲೀಷ್, ಮರಾಠಿ, ಇತಿಹಾಸ, ಅರ್ಥಶಾಸ್ತ್ರ ಸಮಾಜಶಾಸ್ತ್ರ ಸಮಾಜಕಾರ್ಯ, ರಾಜ್ಯಶಾಸ್ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ

ಆ. ವಿಜ್ಞಾನ ನಿಕಾಯ:

1 ಎಂ.ಎಸ್ಸಿ: ಭೌತಶಾಸ್ತ್ರ ರಸಾಯನಶಾಸ್ತ್ರ ಗಣಿತಶಾಸ್ತ್ರ ಪ್ರಾಣಿಶಾಸ್ತ್ರ ಸಸ್ಯಶಾಸ್ತ್ರ ಗಣಕ ವಿಜ್ಞಾನ, ಭೂಗೋಳಶಾಸ್ತ್ರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಅಪರಾಧಶಾಸ್ತ್ರ ಮತ್ತು ನ್ಯಾಯ ವಿಜ್ಞಾನ, ಪರಿಸರ ವಿಜ್ಞಾನ, ಜೀವರಸಾಯನಶಾಸ್ತ್ರ ಸೂಕ್ಷ್ಮಜೀವವಿಜ್ಞಾನ, ಮದ್ಯಸಾರ ತಂತ್ರಜ್ಞಾನ.

ಇ. ವಾಣಿಜ್ಯ ನಿಕಾಯ:

.  ಶಿಕ್ಷಣ ನಿಕಾಯ:

1. ಎಂ.ಇಡಿ, ಎಂ.ಪಿ.ಇಡಿ

ಉ. ಎಂ.ಬಿ.ಎ/ಎಮ್.ಸಿ.ಎ- ಕೆಇಯೆ ಯಿಂದ ನಡೆಸಲ್ಪಡುವ ಪಿ.ಜಿ.ಸಿ.ಇ.ಟಿ ಮುಖಾಂತರ ಪ್ರವೇಶ ಪಡೆದುಕೊಳ್ಳುವುದು.

ಊ. ಡಿಪ್ಲೋಮಾ ಕೋರ್ಸ್:

1. ಡಿಪ್ಲೋಮಾ ಇನ್ ಅಂಬೇಡ್ಕರ ಸ್ಟಡೀಸ್.

2. ಡಿಪ್ಲೋಮಾ ಇನ್ ಫಾರೆನ್ಸಿಕ್ ಸೈನ್ಸ್

3. ಡಿಪ್ಲೋಮಾ ಇನ್ ಜಿಯೋಗ್ರಾಫಿಕಲ್ ಇನ್ಸಾರ್ಮೇಶನ್ ಸಿಸ್ಟಮ್

II. ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು:

1. ಅರ್ಜಿಯನ್ನು ಕಡ್ಡಾಯವಾಗಿ ಆನ್‌ಲೈನ್ https://uucms.karnataka.gov.in ಮುಖಾಂತರವೇ ಸಲ್ಲಿಸಬೇಕು.

2. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಹ ಕೋರ್ಸುಗಳಿಗೆ ಪ್ರತ್ಯೇಕವಾಗಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು.

3. ಪದವಿಯ ಪರೀಕ್ಷೆಗಳ ಫಲಿತಾಂಶ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳೂ ಸಹ ಅರ್ಜಿಯನ್ನು ಸಲ್ಲಿಸಬಹುದು. ಆದರೆ ಆಯ್ಕೆಯಾದ ಸಂದರ್ಭದಲ್ಲಿ ಉತ್ತೀರ್ಣ ಹೊಂದಿದ ಫಲಿತಾಂಶದ ಮುದ್ರಿತ ಪ್ರತಿಯನ್ನು ಕಡ್ಡಾಯವಾಗಿ ಹಾಜರಪಡಿಸಬೇಕು.

4. ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ದಿನಾಂಕಗಳ ವಿವರ ಈ ಕೆಳಗಿನಂತಿದೆ:

ಕ್ರಮ ಸಂಖ್ಯೆ

ವಿವರ

ದಿನಾಂಕ

ಅರ್ಜಿ ಶುಲ್ಕ

1

ದಂಡ ರಹಿತ

04-11-2022 ರಿಂದ  18-11-2022

Rs. 1,000/-

2

ದಂಡ ಸಹಿತ

19-11-2022 ರಿಂದ 25-11-2022

Rs. 1,500/-

 5. ಪ್ರವೇಶಾತಿ ಅರ್ಹತೆ ಮತ್ತು ಕೋರ್ಸುಗಳ ಶುಲ್ಕದ ಮಾಹಿತಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಜಾಲತಾಣ www.rcub.ac.in ನಿಂದ ಪಡೆದುಕೊಳ್ಳಬಹುದು.

6. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಒಂದು ಮುದ್ರಿತ ಪ್ರತಿಯನ್ನು ಅಗತ್ಯವಿರುವ ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ನಿಗದಿತ ದಿನಾಂಕದೊಳಗೆ ಸಂಬಂಧಪಟ್ಟ ಮುಖ್ಯಸ್ಥರು, ಸ್ನಾತಕೋತ್ತರ ವಿಭಾಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಭೂತರಾಮನಹಟ್ಟಿ ಬೆಳಗಾವಿ 591156 ಈ ವಿಳಾಸಕ್ಕೆ ಕಳುಹಿಸತಕ್ಕದ್ದು.

7. UUCMS ಮುಖಾಂತರ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಹಾಗೂ ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಸಲ್ಲಿಸುವ ಅಥವಾ ಅಪೂರ್ಣವಾದ ಅರ್ಜಿಗಳನ್ನು ಯಾವುದೇ ಮಾಹಿತಿ ನೀಡದೇ ತಿರಸ್ಕರಿಸಲಾಗುವುದು. ಆಫ್ ಲೈನ್ ಮೂಲಕ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.

8. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗ ಅಥವಾ ವಿದ್ಯಾಮಂಡಳ ವಿಭಾಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರನ್ನು Telephone : 0831-2565234/25708083: E-mail: uucms@rcub.ac.in.

9. ಸಂಯೋಜಿತ ಮಹಾ ವಿದ್ಯಾಲಯಗಳ ಪಟ್ಟಿ ಬೇಕಾದಲ್ಲಿ ಇಲ್ಲಿ ಕ್ಲಿಕ್ ಮಾಡಿ (Click Here) .

III.  Fees Details : 

ಅ.ಕಲಾ ನಿಕಾಯ

ಆ. ವಿಜ್ಞಾನ ನಿಕಾಯ

ಇ. ವಾಣಿಜ್ಯ ನಿಕಾಯ

 ಶಿಕ್ಷಣ ನಿಕಾಯ



0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ