Ts ads

This is default featured post 1 title

Go to Blogger edit html and find these sentences.Now replace these sentences with your own descriptions.

This is default featured post 2 title

Go to Blogger edit html and find these sentences.Now replace these sentences with your own descriptions.

This is default featured post 3 title

Go to Blogger edit html and find these sentences.Now replace these sentences with your own descriptions.

This is default featured post 4 title

Go to Blogger edit html and find these sentences.Now replace these sentences with your own descriptions.

This is default featured post 5 title

Go to Blogger edit html and find these sentences.Now replace these sentences with your own descriptions.

ಅಭಾವಿಪ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಭಾವಿಪ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

05 ಸೆಪ್ಟೆಂಬರ್, 2022

ರಾಷ್ಟ್ರೀಯ ಶಿಕ್ಷಣ ನೀತಿ 2020: ಪದವಿ ಶಿಕ್ಷಣದ ಬಗ್ಗೆ ಈ ವಿಷಯವನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ತಿಳಿದುಕೊಳ್ಳಬೇಕು.


2022-23 ನೇ ಇಸ್ವಿಗೆ ಪ್ರವೇಶ ಪಡೆದ ಡಿಗ್ರಿ ವಿದ್ಯಾರ್ಥಿಗಳು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಅರ್ಥೈಸಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ ಹಾಗಾಗಿ ಈ ಲೇಖನದ ಮೂಲಕ ನಾನು NEP 2020 ಬಗ್ಗೆ ವಿಶ್ಲೇಷಿಸುವ ಪ್ರಯತ್ನ ಮಾಡುತ್ತಿದ್ದೇನೆ . ಉನ್ನತ ಶಿಕ್ಷಣ ಹಂತದಲ್ಲಿ ಇರುವ ಕೆಲವು ಅಮೂಲಾಕ್ರ ಬದಲಾವಣೆಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.

ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ NEP 2020ರ ಈ ಮಾಹಿತಿಯನ್ನು ವಿಧ್ಯಾರ್ಥಿಗಳು ತಿಳಿದುಕೊಳ್ಳಲೇಬೇಕು: 

1. ಪಿಯುಸಿ ಮುಗಿಸಿದ ಮೇಲೆ ಪದವಿ ಕಾಲೇಜಿಗೆ UUCMS ಆನ್ಲೈನ್ ಪೋರ್ಟಲ್ ಮೂಲಕ ಪ್ರವೇಶ ಪಡೆಯಬೇಕು ಮೊದಲನೇ ವರ್ಷವನ್ನು ಸಂಪೂರ್ಣವಾಗಿ ಮುಗಿಸಿದರೆ 1st year completed successfully ಎಂದು ಒಂದು certificate ನೀಡಲಾಗುವುದು.

2. ಮೊದಲನೇ ವರ್ಷ ಮುಗಿಸಿ ಎರಡನೆಯ ವರ್ಷವು ಪ್ರವೇಶ ಪಡೆಯಬೇಕು ಎರಡನೇ ವರ್ಷವನ್ನು ಸಂಪೂರ್ಣವಾಗಿ ಮುಗಿಸಿದರೆ ಒಂದು Diploma certificate ನೀಡಲಾಗುವುದು.

3. ಎರಡನೇ ವರ್ಷ ಮುಗಿಸಿ ಮೂರನೇಯ ವರ್ಷವು ಪ್ರವೇಶ ಪಡೆಯಬೇಕು ಮೂರನೇ ವರ್ಷವನ್ನು ಸಂಪೂರ್ಣವಾಗಿ ಮುಗಿಸಿದರೆ Bachelor Degree certificate ನೀಡಲಾಗುವುದು. ಈ certificate ಪಡೆದ ವಿದ್ಯಾರ್ಥಿಗಳು B.Ed ಅಥವಾ M.A, M.Sc, M.Com ಅಥವಾ ಇತರೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹುದು.

4. ಯಾರಿಗೆ ಮುಂದುವರಿಸಲು ಇಷ್ಟವಿದೆಯೋ ಅಂಥವರು ನಾಲ್ಕನೇ ವರ್ಷಕ್ಕೆ admission ಮಾಡಿಕೊಳ್ಳಬಹುದು. ಇದು ಎಲ್ಲರಿಗೂ Compulsory ಇರುವುದಿಲ್ಲ .
ಯಾರು ನಾಲ್ಕನೇ ವರ್ಷವನ್ನು ಸಂಪೂರ್ಣವಾಗಿ ಮುಗಿಸುವರೋ ಅಂಥವರಿಗೆ ಹಾನರ್ಸ್ ಸರ್ಟಿಫಿಕೇಟ್ ನೀಡಲಾಗುವುದು.
ಹಾನರ್ಸ್ ಸರ್ಟಿಫಿಕೇಟ್ ಪಡೆದವರಿಗೆ ಒಂದು ವರ್ಷ ಮಾತ್ರ PG (M.A, M.Sc, and M.Com etc...) ಇರುತ್ತದೆ ಅಷ್ಟೇ.

5. ಅಂಕಗಳು ಒಟ್ಟು ನೂರು ಅಂಕಗಳ ಪೈಕಿ ವಿದ್ಯಾರ್ಥಿಗಳು 60 ಅಂಕಗಳಿಗೆ ಲಿಖಿತ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಬೇಕು ಬಾಕಿ ಉಳಿದ 40 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗುವುದು. 60 ಅಂಕಗಳ ಲಿಖಿತ ಪರೀಕ್ಷೆಯ ಸಮಯ ಕೇವಲ ಎರಡು ಗಂಟೆ ಯದಾಗಿರುತ್ತದೆ.

6. ಇನ್ನೊಂದು ಪ್ರಮುಖವಾದ ಅಂಶ ಏನೆಂದರೆ, ಯಾವ ವಿದ್ಯಾರ್ಥಿಗಳು ಶೇಕಡ 75ಕ್ಕಿಂತ ಕಡಿಮೆ ಹಾಜರಾತಿಯನ್ನು ಹೊಂದಿರುತ್ತಾನೆಯೋ ಆ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವ ಅವಕಾಶ ಇರುವುದಿಲ್ಲ ಹಾಗಾಗಿ ಶೇಕಡ 75 ರಷ್ಟು ಹಾಜರಾತಿ ಇರುವುದು compulsory ಕಡ್ಡಾಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ B.Ed. ಗೆ ಹೋಗಲು ಬಯಸುವವರು  ಮೂರು ವರ್ಷಗಳ ಪದವಿ ಶಿಕ್ಷಣ ಮುಗಿದ ನಂತರ Bachelor Degree certificate ಪಡೆದುಕೊಂಡು B.Ed. ಮಾಡಬಹುದು.
ಅದೇ ರೀತಿ ಮೂರು ವರ್ಷಗಳ ಪದವಿ ಮುಗಿದ ನಂತರ ಎರಡು ವರ್ಷಗಳ MA, MSc, MCom ಇತ್ಯಾದಿ PG ಕೋರ್ಸ್ ಗಳಿಗೆ join ಆಗಬಹುದು.

ಡಿಗ್ರಿ ಸರ್ಟಿಫಿಕೇಟ್ ಪಡೆಯಲು 4 ವರ್ಷ ಸಂಪೂರ್ಣವಾಗಿ ಮುಗಿಸಲೇಬೇಕೆಂದು ಯಾವುದೇ ತರಹದ ಕಟ್ಟಪ್ಪನೆಗಳಿಲ್ಲಾ (Compulsory) ಇರುವುದಿಲ್ಲ. ಈಗಿರುವ ರೀತಿಯೇ 3ವರ್ಷ ಓದಿದರೆ ಸಾಕು ಪದವಿ ಪ್ರಮಾಣಪತ್ರ ಸಿಗುತ್ತದೆ.

ಸೂಚನೆ: ಪದವಿ ಶಿಕ್ಷಣ ಪಡೆಯಲು ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಆಸ್ಪದಕೊಡದೆ ಪದವಿ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ.

06 ಜುಲೈ, 2022

ವಿದ್ಯಾರ್ಥಿ ಪರಿಷತ್, ಸ್ಥಾಪನೆಯ 75 ವರ್ಷಗಳು ನಡೆದು ಬಂದ ದಾರಿ

೧೯೪೮ ರಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೂರಗಾಮಿ ಚಿಂತನೆಯ ಫಲವಾಗಿ ನಾಲ್ಕಾರು ಮಂದಿ ಕಾರ‍್ಯಕರ್ತರ ಪ್ರಯತ್ನದೊಂದಿಗೆ ತನ್ನ ಅನೌಪಚಾರಿಕ ಉಗಮವನ್ನು ಕಂಡುಕೊಂಡ ಅಖಿಲ ಭಾರತೀಯ  ವಿದ್ಯಾರ್ಥಿ ಪರಿಷತ್(ಎಬಿವಿಪಿ) ೧೯೪೯ ಜುಲೈ ೯ ರಂದು (S-೩೮೫/೧೯೪೯-೫೦) ನೋಂದಾಯಿ ಸಲ್ಪಟ್ಟಿತು. ಆರಂಭದಲ್ಲಿ ನಾಲ್ಕಾರು ರಾಜ್ಯಗಳಲ್ಲಿ ಸಾಂಕೇತಿಕವಾಗಿ ಎಂಬಂತೆ ತನ್ನ ಅಸ್ತಿತ್ವವನ್ನು ಹೊಂದಿದ್ದ ವಿದ್ಯಾರ್ಥಿ ಪರಿಷತ್, ಸ್ಥಾಪನೆಯ 75 ವರ್ಷಗಳ ಬಳಿಕ ಇಂದು ದೇಶದ ಉದ್ದಗಲಕ್ಕೂ ವ್ಯಾಪಿಸಿ ಎಲ್ಲಾ ರಾಜ್ಯಗಳ, ಎಲ್ಲಾ ಜಿಲ್ಲೆಗಳಲ್ಲೂ ತನ್ನ ಶಾಖೆಯ ಇಲ್ಲವೇ ಸಂಪರ್ಕದ ಕೊಂಡಿಯನ್ನು ಸ್ಥಾಪಿಸಿಕೊಂಡಿದೆ.


ಪರಿಷತ್ತಿನ ಪ್ರಧಾನ ತಾತ್ವಿಕ ವಿಚಾರಗಳು:

೧.    ಸಮಸ್ತ ಶೈಕ್ಷಣಿಕ ಸಮುದಾಯದ ಸಂಘಟನೆ, ಒಂದು ಪಾರಿವಾರಿಕ ನೆಲೆಯಲ್ಲಿ.
೨.    ರಾಷ್ಟ್ರೀಯ ಹಾಗೂ ರಚನಾತ್ಮಕ ದೃಷ್ಟಿ ಹೊಂದಿರುವುದು.
೩.    ಪಕ್ಷ ಹಾಗೂ ಅಧಿಕಾರದ ರಾಜಕಾರಣ ದಿಂದ ಮುಕ್ತವಾಗಿರುವುದು.
೪.    'ಇಂದಿನ ವಿದ್ಯಾರ್ಥಿ – ಇಂದಿನ ಪ್ರಜೆ’ ಎಂಬ ನಂಬಿಕೆ ಹೊಂದಿರುವುದು.

ಪರಿಷತ್ತಿನ ಮೌಲ್ಯಾದರ್ಶಗಳು: 
ಜ್ಞಾನ, ಶೀಲ, ಏಕತೆ

ಪರಿಷತ್ತಿನ ನಿರ್ವಹಣೆ ಮಾಡುವ ಮೂರು ಬಗೆಯ ಕಾರ್ಯಗಳು: 
೧.    ರಚನಾತ್ಮಕ ಕಾರ್ಯ.
೨.    ಆಂದೋಲನಾತ್ಮಕ ಕಾರ್ಯ.
೩.    ಪ್ರಾತಿನಿಧ್ಯಾತ್ಮಕ ಕಾರ್ಯ.

ಪರಿಷತ್ತಿನ ಚಟುವಟಿಕೆಗಳು: 
☆    ಇಂದಿನ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ- ಸಾಮಾಜಿಕ ಕಳಕಳಿ ನಿರ್ಮಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು.
☆    ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಧೈರ್ಯ, ವಿಶ್ವಾಸ, ಸಾಹಸ ನಾಯಕತ್ವ ಗುಣಗಳು, ನಿರ್ಮಿಸಲು ನೂರಾರು ರೀತಿಯ ಚಟುವಟಿಕೆಗಳನ್ನು ಆಯೋಜಿಸುವುದು.
☆    ಅಧ್ಯಯನ ಕೇಂದ್ರ, ವ್ಯಕ್ತಿತ್ವ ವಿಕಸನ ಶಿಬಿರ, ರಕ್ತದಾನ ಶಿಬಿರ ಮುಂತಾದ ನೂರಾರು ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿದೆ.


ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ರಚನಾತ್ಮಕ ಕಾರ್ಯಕ್ರಮಗಳು: 
೧.    ಸೃಷ್ಟಿ – ಇಂಜನೀಯರಿಂಗ್ ವಿದ್ಯಾರ್ಥಿಗಳಿಗಾಗಿ ಪ್ರೊಜೆಕ್ಟ್‌ಗಳ ಪ್ರದರ್ಶನ.
೨.    ಜಿಜ್ಞಾಸ – ಆಯುರ್ವೇದಿಕ್ ವಿದ್ಯಾರ್ಥಿಗಳಿಗಾಗಿ.
೩.    ರಂಗತೋರಣ – ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಆಸಕ್ತಿಯನ್ನು ಹೆಚ್ಚಿಸಲು
೪.    ಕಲಾದರ್ಪಣ – ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ಅರಿವು, ಆಸಕ್ತಿ ಮೂಡಿಸಲು
೫.    ಇನಸೈಟ್ – ಕಾನೂನು ವಿದ್ಯಾರ್ಥಿಗಳಿಗಾಗಿ ವಿಶಿಷ್ಟ ಕಾರ್ಯಕ್ರಮ
೬.    ಜ್ಞಾನ – ವೃತ್ತಿಪರ ವಿದ್ಯಾರ್ಥಿಗಳಿಗಾಗಿ
೭.    ಯುವ ಭಾರತ್ – ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಲು
೮.    ಸ್ವದೇಶ್- ಹಳ್ಳಿಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಲು

ವಿವಿಧ ಸೇವಾ ಪ್ರಕಲ್ಪಗಳು:
☆ ವಿದ್ಯಾರ್ಥಿ ಶಿಕ್ಷಣ ಸೇವಾ ಕೇಂದ್ರ – ಶೈಕ್ಷಣಿಕ ಸಂಶೋಧನೆ
☆ ವಿದ್ಯಾಪಥ : ವಿದ್ಯಾರ್ಥಿಗಳಿಗೆ ಎಲ್ಲಾ ಕಾಲೇಜುಗಳ ಮಾಹಿತಿ ಮತ್ತು ಕೌನ್ಸೆಲಿಂಗ್‌ಗೆ ವಿದ್ಯಾಪಥ ಎಂಬ ವೆಬ್‌ಸೈಟ್  www.vidhyapath.com
☆ ’ವಿದ್ಯಾರ್ಥಿಪಥ’- ವಿದ್ಯಾರ್ಥಿ ಪರಿಷತ್‌ನ ಚಟುವಟಿಕೆಗಳ ಬಗ್ಗೆ ತಿಳಿಸುವ ಮಾಸಪತ್ರಿಕೆ.
☆ ಬುಕ್‌ಬ್ಯಾಂಕ್ – ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪುಸ್ತಕ ವಿತರಣೆ.


ಶಿಕ್ಷಣ ಕ್ಷೇತ್ರದ ಸುಧಾರಣೆಯಲ್ಲಿ ಅಭಾವಿಪ ಪಾತ್ರ: 
☆   ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಪರಿಷತ್ತಿನ ಆದ್ಯತೆಯ ಕಾರ‍್ಯ.
☆    ಶೈಕ್ಷಣಿಕ ಪರಿಸರದ ಸ್ವಚ್ಛತೆಯ ಪ್ರಯತ್ನ
☆    ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರದ ವಿರುದ್ಧ ಸಮರ
☆    ಶಿಕ್ಷಣದ ವ್ಯಾಪಾರೀಕರಣ ವಿರುದ್ಧ ಅಭಾವಿಪ ತನ್ನ ಹೋರಾಟದ ಅಭಿಯಾನ ಮುಂದುವರೆಸಿದೆ.
☆    ಪಠ್ಯಪುಸ್ತಕಗಳಲ್ಲಿನ ಇತಿಹಾಸದ ವಿಕೃತಿ ಕುರಿತಾಗಿ ಪರಿಷತ್ ಕಾಲಕಾಲಕ್ಕೆ ಪ್ರತಿಭಟನೆ ನಡೆಸಿದೆ.
☆    ಕಾಲೇಜು ಪರಿಸರದಲ್ಲಿ ಪಾಶ್ಚಾತ್ಯ ಜೀವನ ಶೈಲಿಯನ್ನು ಪ್ರಸಾರ ಮಾಡುತ್ತಿರುವ ವ್ಯಾಪಾರಿ ಶಕ್ತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಾವಿಪ ಜಾಗೃತಿ ಮೂಡಿಸುತ್ತದೆ.


ಸಾಮಾಜಿಕ ಕ್ಷೇತ್ರದಲ್ಲಿ ಪರಿಷತ್ ಉಂಟು ಮಾಡಿರುವ ಸ್ಪಂದನೆ: 
☆    ಸಾಮರಸ್ಯ ಭಂಜಕರಿಂದ ವಿದ್ಯಾರ್ಥಿಗಳನ್ನು ದೂರವಿರಿಸುವಿಕೆ.
☆    ಮೀಸಲಾತಿ ನಿರ್ಮಿಸಿದ ಕಂದಕದ ನಿವಾರಣೆಗೆ ಮತ್ತು ಸಾಮಾಜಿಕ ಸದ್ಭಾವನೆ ನಿರ್ಮಾಣ.
☆    ತಣಿಸಿದ ಜಾತಿ ದ್ವೇಷದ ದಳ್ಳುರಿ.
☆    ಉಪೇಕ್ಷಿತ ವಿದ್ಯಾರ್ಥಿ ಬಂಧುಗಳ ಬಗೆಗಿನ ಭ್ರಾತೃಪ್ರೇಮ.
☆    ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿಯನ್ನು ಉತ್ಪನ್ನ ಮಾಡುವಲ್ಲಿ ಪರಿಷತ್ ಸಾಕಷ್ಟು ಸಫಲತೆಯನ್ನು ಕಂಡಿದೆ.

ರಾಷ್ಟ್ರೀಯ ಸಮಸ್ಯೆಗಳ ಕುರಿತು ಅಭಾವಿಪ ನಡೆ: 
☆    ರಾಷ್ಟ್ರೀಯ ಬೇಡಿಕೆಗಳಿಗಾಗಿ ಒತ್ತಾಯ,
(ದೇಶದ ಹೆಸರು, ಇಂಡಿಯಾದ
ಬದಲಿಗೆ ಭಾರತ, ರಾಷ್ಟ್ರಗೀತೆಯಾಗಿ
ವಂದೇಮಾತರಂ ಬಳಕೆ ಮಾಡುವಂತೆ
ಬೇಡಿಕೆ)
☆    ಭಾರತದ ಮೇಲಾದ ಭೌಗೋಳಿಕ,
ಸಾಂಸ್ಕೃತಿಕ, ಸಾಮಾಜಿಕ ಆಕ್ರಮಣ ಮಾಡಿರುವುದು ಖಂಡಿತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸುತ್ತಿದೆ.


ಮಹಾದೇವ ಧರಿಗೌಡರ 
ಬೆಳಗಾವಿ