
1989ರಲ್ಲಿ ಕೇವಲ ಹತ್ತು ಜನ ಸೇರಿ ಅಥಣಿ ತಾಲೂಕಿನ ಸಂಕೋನಟ್ಟಿ ಮತ್ತು ನಂದಗಾಂವದಲ್ಲಿ ನಿರ್ಮಾಣ ಆದ ಸಂಸ್ಥೆ ವರ್ಧಮಾನ ಶಿಕ್ಷಣ ಸಂಸ್ಥೆಯು 35ವರ್ಷಗಳನ್ನು ಪೂರೈಸಿದ್ದಕ್ಕೆ. ಈ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ಸೇರಿ ಬರುವ ವರ್ಷ 2024 ಫೆಬ್ರವರಿ ತಿಂಗಳ 9, ರಿಂದ 11ವರೆಗೆ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದು. ಇದರ ಪ್ರಯುಕ್ತ 1989 ರಿಂದ 2023ರ ವರೆಗೆ ಎಸ್ ಎಸ್ ಎಲ್ ಸಿ ಪಾಸಾಗಿರುವ ಎಲ್ಲಾ ಹಳೆಯ ವಿದ್ಯಾರ್ಥಿಗಳ ಇವತ್ತು ಶನಿವಾರ 12:00ಕ್ಕೆ ಸಂಕೋನಟ್ಟಿಯ ಹೈಸ್ಕೂಲ್ ಸಭಾಗೃಹದಲ್ಲಿ ಸಭೆ ಸೇರಿ ವಿವಿಧ ರೀತಿಯ ಚರ್ಚೆ ನಡೆಸಿದರು. ಈ ಪೂರ್ವಭಾವಿ ಸಭೆಯಲ್ಲಿ ಮುಖ್ಯೋಪಾಧ್ಯಾಯರಾದ ಲಡಗಿ ಸರ್ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಅನಂತ್ ಬಸರಿಕೋಡಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ ಉಗಾರೆ ಈ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು....