
ಬೆಳಗಾವಿ : ಜಾಗತೀಕರಣವು ವಾಣಿಜ್ಯ ಅಧ್ಯಯನ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭೌತಿಕ ಬುದ್ಧಿಮತ್ತೆ ಮತ್ತು ಇತರ ಹೊಸ ಅಧ್ಯಯನ ಕ್ಷೇತ್ರಗಳು ತೆರೆದುಕೊಳ್ಳುತ್ತಿದ್ದು, ಇದರಿಂದ ವಾಣಿಜ್ಯ ಅಧ್ಯಯನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮುಂಬರುವ ಪೀಳಿಗೆ ಈ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಮತ್ತು ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವಿದ್ಯಾಲಯದ ಬಿ ಎಸ್ ನಾವಿ ಅವರು ಕಳವಳ ವ್ಯಕತಪಡಿಸಿದ್ದಾರೆ. ಬೆಳಗಾವಿಯ ಮಹಾಂತ ಭವನದಲ್ಲಿ ಗುರುವಾರ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಮಹಾವಿದ್ಯಾಲಯ ಅಧ್ಯಾಪಕರ ಸಂಘವು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ, ಜಾಗತೀಕರಣದ ಪ್ರಭಾವ ಮತ್ತು ವಾಣಿಜ್ಯ ಅಧ್ಯಯನ ಕ್ಷೇತ್ರದ ಮೇಲಿನ ಪರಿಣಾಮಗಳ ಕುರಿತು ಪ್ರೊ. ಬಿ. ಎಸ್. ನಾವಿ ಮತ್ತು ಎಸ್. ಬಿ. ಆಕಾಶ ಅವರು ತಮ್ಮ ಅಭಿಪ್ರಾಯಗಳನ್ನು...