
ಬೆಳಗಾವಿ: ಪ್ರಸಕ್ತ ದಿನಗಳಲ್ಲಿ ಬಸವಣ್ಣ ಮತ್ತು ಶರಣರ ಮೂಲ ಆದರ್ಶಗಳನ್ನು ಮರೆಮಾಚಲಾಗುತ್ತಿದೆ. ಹಾಗಾಗೀ ಶರಣರ ರಚಿಸಿದ ಮೂಲ ವಚನಗಳ ಆಧಾರದ ಮೇಲೆ ಶರಣರ ಮತ್ತು ಬಸವಣ್ಣ ಅವರ ನೈಜ ಅದರ್ಶಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಗದಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಪ .ಪೂ. ಶ್ರೀ ಸದಾಶಿವಾನಂದ ಸ್ವಾಮೀಜಿ ಹೇಳಿದರು.ನಗರದ ನೆಹರೂನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶರಣರಷ್ಟು ಸಮಾಜ ಮತ್ತು ಭಕ್ತಿಯ ಬಗ್ಗೆ ತಿಳಿಯದ ಅನೇಕ ಮೂಢರು, ಬಸವಣ್ಣ ಮತ್ತು ಶರಣರ ವಚನಗಳನ್ನು ತಪ್ಪಾದ ಪ್ರಯೋಗ ಮತ್ತು ವ್ಯಾಖ್ಯಾನಿಸುವ ಮೂಲಕ ಶರಣರ ಸಂದೇಶಗಳನ್ನು ಪ್ರಸಕ್ತ ಪೀಳಿಗೆಗೆ ತಪ್ಪಾಗಿ ಅರ್ಥೈಸಲಾಗುತ್ತಿರುವುದು ಖೇದಕರ. ಲಿಂಗಧಾರಣೆ ಮತ್ತು ಲಿಂಗಪೂಜೆ ಮಾಡದವರು ಲಿಂಗಾಯತ ಮತ್ತು ಬಸವಣ್ಣ ಅವರ ಬಹು ಪಾಂಡಿತ್ಯ ಪಡೆದವರಂತೆ ಬಿಂಬಿಸುವುದರ ಜೊತೆಗೆ ಸಮಾಜಕ್ಕೆ...