Ts ads

This is default featured post 1 title

Go to Blogger edit html and find these sentences.Now replace these sentences with your own descriptions.

This is default featured post 2 title

Go to Blogger edit html and find these sentences.Now replace these sentences with your own descriptions.

This is default featured post 3 title

Go to Blogger edit html and find these sentences.Now replace these sentences with your own descriptions.

This is default featured post 4 title

Go to Blogger edit html and find these sentences.Now replace these sentences with your own descriptions.

This is default featured post 5 title

Go to Blogger edit html and find these sentences.Now replace these sentences with your own descriptions.

09 ಜುಲೈ, 2024

ಶರಣ ಪರಂಪರೆ, ಭಕ್ತಿ ಮತ್ತು ಕಾಯಕ ಮತ್ತು ಮಹಿಳಾ ಸಮಾನತೆ ಮತ್ತು ಸಮಾಜದ ಸಾಮರಸ್ಯಕ್ಕಾಗಿ ಶರಣರು ನೀಡಿದ ಕೊಡುಗೆ ಅಪಾರ

ಬೆಳಗಾವಿ: ಪ್ರಸಕ್ತ ದಿನಗಳಲ್ಲಿ ಬಸವಣ್ಣ ಮತ್ತು ಶರಣರ ಮೂಲ ಆದರ್ಶಗಳನ್ನು ಮರೆಮಾಚಲಾಗುತ್ತಿದೆ. ಹಾಗಾಗೀ ಶರಣರ ರಚಿಸಿದ ಮೂಲ ವಚನಗಳ ಆಧಾರದ ಮೇಲೆ ಶರಣರ ಮತ್ತು ಬಸವಣ್ಣ ಅವರ ನೈಜ ಅದರ್ಶಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಗದಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಪ .ಪೂ. ಶ್ರೀ ಸದಾಶಿವಾನಂದ ಸ್ವಾಮೀಜಿ ಹೇಳಿದರು.



ನಗರದ ನೆಹರೂನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಶರಣರಷ್ಟು ಸಮಾಜ ಮತ್ತು ಭಕ್ತಿಯ ಬಗ್ಗೆ ತಿಳಿಯದ ಅನೇಕ ಮೂಢರು, ಬಸವಣ್ಣ ಮತ್ತು ಶರಣರ ವಚನಗಳನ್ನು ತಪ್ಪಾದ ಪ್ರಯೋಗ ಮತ್ತು ವ್ಯಾಖ್ಯಾನಿಸುವ ಮೂಲಕ ಶರಣರ ಸಂದೇಶಗಳನ್ನು ಪ್ರಸಕ್ತ ಪೀಳಿಗೆಗೆ ತಪ್ಪಾಗಿ ಅರ್ಥೈಸಲಾಗುತ್ತಿರುವುದು ಖೇದಕರ. ಲಿಂಗಧಾರಣೆ ಮತ್ತು ಲಿಂಗಪೂಜೆ ಮಾಡದವರು ಲಿಂಗಾಯತ ಮತ್ತು ಬಸವಣ್ಣ ಅವರ ಬಹು ಪಾಂಡಿತ್ಯ ಪಡೆದವರಂತೆ ಬಿಂಬಿಸುವುದರ ಜೊತೆಗೆ ಸಮಾಜಕ್ಕೆ ದಾರಿ ತಪ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.


ಶರಣರ ವಚನಗಳು ಇಂದು ಸಮಾಜಕ್ಕೆ ಲಭ್ಯವಾಗಿರುವುದಕ್ಕೆ ವಚನ ಪಿತಾಮಹಾ ಫ.ಗು.ಹಳಕಟ್ಟಿ ಮತ್ತು ಭೂಶಿಮಠರ ಕಾರ್ಯ ಅನನ್ಯವಾಗಿದೆ. ಬಹಳಷ್ಟು ಮಹನೀಯರ ಅಪಾರ ಶ್ರಮ ಮತ್ತು ತ್ಯಾಗದ ಫಲದಿಂದ ಎಲ್ಲೆಲ್ಲೊ ಕಳೆದು ಹೋಗಿದ್ದ ಶರಣರ ವಚನಗಳು ನಮಗೆಲ್ಲಾ ಓದಲು ಮತ್ತು ಅಧ್ಯಯನ ಮಾಡಲು ಲಭ್ಯವಾಗಿವೆ. ಆದ್ದರಿಂದ ಶರಣರ ವಚನಗಳನ್ನು ಓದುವುದರ ಮತ್ತು ಅಧ್ಯಯನದ ಮೂಲಕ ನಾವೆಲ್ಲರೂ ಶರಣ ಆಶಯಗಳನ್ನು ಅರಿಯಲು ಮುಂದಾಗಬೇಕು ಎಂದರು.


ಅಲ್ಲಮ ಪ್ರಭು ಅವರು ಬಸವಣ್ಣನನ್ನು ಯುಗದ ಉತ್ಸಾಹ ಎಂದು ಕರೆದಿದ್ದಾರೆ. ಶರಣೆ ಅಕ್ಕ ನಾಗಮ್ಮ ತಮ್ಮ ವಚನಗಳಲ್ಲಿ ಬಸವಣ್ಣ ಅವರ ಕಾರ್ಯ ಮತ್ತು ಅದರ್ಶಗಳನ್ನು ಅತ್ಯಂತ ನೈಜ ರೂಪದಲ್ಲಿ ವಿವರಣೆ ನೀಡಿದ್ದಾರೆ. ಆದ್ದರಿಂದ ಬಸವಣ್ಣ ಅವರನ್ನು ಅರಿಯಲು ಅಕ್ಕ ನಾಗಮ್ಮ ಅವರ ವಚನಗಳನ್ನು ವಾಚಿಸಬೇಕು. ಆ ಶಿವಶರಣರ ಪಾಂಡಿತ್ಯಕ್ಕೆ ಸಮ ಪ್ರಸಕ್ತ ದಿನಗಳಲ್ಲಿ ನಾವು ಯಾರು ಇಲ್ಲ. ಆದ್ದರಿಂದ ಶರಣರ ವಚನಗಳನ್ನು ಮೂಲ ರೂಪದಲ್ಲಿರುವಂತೆ ಓದಲು ಮತ್ತು ಅಧ್ಯಯನಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದರು.



ನಿವೃತ್ತ ಪ್ರಾಧ್ಯಾಪಕಿ ಡಾ. ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ, ವಚನ ದರ್ಶನ ಕೃತಿಯ ಪರಿಚಯ ಮಾಡಿಕೊಟ್ಟರು. ಶರಣ ಪರಂಪರೆ, ಭಕ್ತಿ ಮತ್ತು ಕಾಯಕ ಮತ್ತು ಮಹಿಳಾ ಸಮಾನತೆ ಮತ್ತು ಸಮಾಜದ ಸಾಮರಸ್ಯಕ್ಕಾಗಿ ಶರಣರು ನೀಡಿದ ಕೊಡುಗೆ  ಬಗ್ಗೆ ಸವಿವರವಾದ ಮಾಹಿತಿ ವಚನ ದರ್ಶನ ಕೃತಿ ಒಳಗೊಂಡಿದೆ. ಸಾಮಾನ್ಯ ಲಿಂಗಾಯತರು ಮನೆಯಲ್ಲಿ ಲಿಂಗಪೂಜೆ ಮತ್ತು ವಚನ ಅಧ್ಯಯನ ಕುರಿತಂತೆ ಮುಂದಿನ ಪೀಳಿಗೆಗೆ ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದರು.


ಸಾಹಿತಿ ಮತ್ತು ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲ ಮಾತನಾಡಿ, ಬಸವಕಲ್ಯಾಣ ಕೇಂದ್ರಿತವಾದ ಶರಣ ಸಾಹಿತ್ಯವು, ದೇಶ ಮಾತ್ರವಲ್ಲದೆ ದೂರದ ಅಫಘಾನಿಸ್ಥಾನದವರೆಗೂ ಹಬ್ಬಿತ್ತು. ಅನೇಕ ವಿದೇಶಿಗರು ಶರಣರ ಸಾಹಿತ್ಯ ಮತ್ತು ಭಕ್ತಿಪರಂಪರೆಗೆ ಪ್ರಭಾವಿತರಾಗಿ ಅನುಭವ ಮಂಟಪಕ್ಕೆ ಆಗಮಿಸಿ, ವಚನ ರಚಿಸಿದ್ದಾರೆ. ಈ ಸಂಗತಿಯು ೧೨ನೇ ಶತಮಾನದ ಶರಣರ ಮತ್ತು ವಚನ ಸಾಹಿತ್ಯದ ಪ್ರಭಾವ ಮತ್ತು ಶಕ್ತಿಗೆ ಸಾಕ್ಷಿಕರಿಸುತ್ತದೆ ಎಂದರು.


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಪ್ರಬುದ್ಧ ಭಾರತದ ಸಂಯೋಜಕಿ ಡಾ. ಅಲ್ಕಾ ಕಾಳೆ, ಡಾ. ಬಸವರಾಜ ಜಗಜಂಪಿ, ಡಾ.ಜೆ. ಮಂಜಣ್ಣಾ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.


ಡಾ. ಶೈಲಜಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ. ನಯನಾ ಗಿರಿಗೌಡರ ಅವರಿಂದ ವಚನ ಗಾಯನ ಪ್ರಸ್ತುತ ಪಡಿಸಿದರು. ಡಾ. ಶರಯೂ ಪೊಟ್ನೀಸ್ ಕಾರ್ಯಕ್ರಮ ನಿರೂಪಿಸಿದರು, ಡಾ. ಸ್ಮಿತಾ ಸುರೇಬಾನಕರ್ ಸ್ವಾಗತ ಭಾಷಣ ಮಾಡಿದರು, ಡಾ. ಶೈಲಜಾ ಹೀರೆಮಠ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮದ ಆಶಯ ತಿಳಿಸಿದರು ಹಾಗೂ ಅಪ್ಪಯ್ಯ ರಾಮರಾವ್ ಅವರು ವಂದನಾರ್ಪಣೆ ಮಾಡಿದರು.

27 ಫೆಬ್ರವರಿ, 2024

ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಹೆಸರಿಡುವ ಅಭ್ಯಾಸ ನಿಂತೇ ಹೋಗಿದೆ. ಕನ್ನಡದಲ್ಲಿ ಇಡಲು ಮುದ್ದಾದ ಹೆಸರುಗಳು ಇವೆಯಾ?

ಅಚ್ಚ ಕನ್ನಡದ ಹೆಸರುಗಳಿಗೆ ಲಿಂಗ ಭೇದವಿಲ್ಲ, ಹಾಗಾಗಿ ಈ ಹೆಸರುಗಳು ನೀವು ಗಂಡು ಮಗುವಿಗೂ ಆದ್ರೂ ಇಡಬಹುದು, ಹೆಣ್ಣು ಮಗುವಿಗಾದ್ರೂ ಇಡಬಹುದು.

ಇನ್ನು ಇದ್ದರೆ ಹಂಚಿಕೊಳ್ಳಿ. ನಿಮಗೆ ತಿಳಿದಿರುವ ಅಚ್ಚುಕನ್ನಡದ ಹೆಸರನ್ನು ತಪ್ಪದೆ ಕಾಂಮೆಂಟ ಮಾಡಿ. 

ಇಬ್ಬನಿ - morning dew

ಇನಿಪು - sweet

ಇನಿಯ - lover

ನಲ್ಲ - lover

ಮುಗಿಲ್ - cloud

ಅರಿಲ್ - star

ಲವಿಕೆ > ಲವಿಕಾ - active

ಹಿರಿಲ್ - mighty

ನೈದಿಲೆ - white lotus

ಕಣ್ಮಣಿ - a person or thing that is loved and admired.

ಅರಗಿಣಿ - royal parrot, cute child.

ಅಚ್ಚರಿ - surprise

ಮಿನುಗು - shine

ನುಡಿ - language

ಕನಸು - dream

ಕನವು - dream

ನಲುಮೆ - love



ಸಿಡಿಲ್ - thunderbolt

ಇಂಪು - pleasant to hear

ಇಂಪನ - music

ಕಂಪು - sweet/pleasant smell, fragrance >ಕಂಪನ

ಪುಟ - page

ಇಂಚರ - cuckoo, melodious sound/tone.

ಚೆಲುವು - beauty

ಚೆಲುವ - handsome man.

ಚೆಲುವೆ - beautiful women.

ಚೆಲುವರಸಿ - queen of beauty

ಚೆಲುವರಸ - king of beauty/good looks.

ಚೆನ್ನಿಗ - good looking/handsome man.

ಕನ್ನಡ - kannada (kanarese) language.

ಕನ್ನರ - a rashtrakuta king

ಸೋನೆ - mistlike rain

ಸಿರಿ - wealth

ಐಸಿರಿ - supreme authority/wealth.

ಒಲವು - love/friendship

ಒಲವಿ - lovable woman.

ಒಲವರಸ - king of love

ಒಲವರಸಿ - queen of love

ಒಲುಮೆ - strong love/passion

ಬಾನು - sky

ನೀಲ - colour blue

ಸೊಬಗು - beauty/loveliness.

ಬೆಳಕು - light

ಬೆಳ್ಳಿ - silver

ಹೊನ್ನು - gold

ಪೊಡವಿ - earth/world

ಪೊಡವರಸ - king of earth/world

ಪೊಡವರಸಿ - queen of earth/ world

ನಿಲಾ - state of being,to stand/reach,

ಬೆರಗು - admiration

ಕಡಲ್ - sea

ಕಂಗಳ್ - eyes

ನೆರಳು - shadow

ನೇಸರ - sun

ನನ್ನಿ - truth

ಎರೆಯ - lord/master

ಕೋಗಿಲೆ - cuckoo

ಕುಂದಣ್ - the work of inlaying pearls, diamond etc. in gold ornaments.

ಕರ್ಕ - tortoise/crab

ದಡಿಗ - strong man.

ಅಯ್ಯ - father

ಅಲಂಪ್ - love, affection, desire, ornament

ಅಲರ್ - to bloom, wind

ಇನಿತಾ - sweet girl

ಉಸಿರ್ - breath/life

ಕದಿರ್ - to shine radiantly

ಗಮನ್ - attention

ಬೆಂಗದಿರ - afternoon sun

ಚೆಂಗದಿರ - rising sun

ಹೊಂಗದಿರ - golden sun

ಚಿಗುರ್ - very young leaves of a plant

ನಗು - laughter

ನೆನಪು - memory

ನಲಿವು - joy, pleasure

ಪಂಜು - torch

ಪದುಳ್ - happiness

ಸೋಜಿಗ - feeling of surprise/admiration

ಮಯಿಲ್ - peacock

ಮೂಡಲ್ - east direction

ಕದಂಬ - a tree

ಹಸಿರು - colour green

ತಂಗಾಳಿ - cool breeze

ಹೆಜ್ಜೆ - footprint

ಚುಕ್ಕಿ - star

ಸುಗ್ಗಿ - harvesting season

ಎರೆಯಂಗ - lord/master

ಮೆರಗು - brightness/lustre

ಮರುಗ - empathic person

ಪೊಲವೀರ -

ಚುರುಕು - clever/intelligent

ಬಯಲ್ - plain region

ತಿಳಿವು - knowledge

ನಾಡಿಗ್ - a native

ಸರಿ - correct/right

ಸೆಲೆ - source

ನೆಲೆ - home

ನವಿರು - soft/subtle > ನವಿ

ಸವಿ - to enjoy

ಸಿಹಿ - sweet

ಪಚ್ಚೆ - emerald

ಅಂಚು - blade of a sword/ border/ nearness

ಅನುವು/ಅನು - opportunity

ನಿಲುವು - opinion/stand

ಸಕ್ಕರೆ - sugar

ಅಕ್ಕರೆ - affection/fondness

ಬದುಕು - to live

ಇರುಳ್ - night > ಇರುಳಾ

ನೆರವು > help

ಕೋಲ್ಮಿಂಚು > thin lightning

ಬೆಳಗು - brighness

ಮೀನಾ - fish, women with round beautiful eyes

ಸೆಳೆತ - attraction

ಚಿಲುಮೆ - fountain/spring

ಗುಬ್ಬಿ - sparrow

ಓರಣ್ - neatness

ಸಳ - a hoysala king

ಎಲರ್ - air/wind

ನನ್ನಿಗ - truthful man

ಗೆಲುವು - victory

ಮುಡಿ - crown

ಕಾದಲ್ - love

ಜೇನು - honey

ಚೆನ್ನಿಗರಾಯ - good looking man

ಮಲರ್ - flower

ಹೊಳಪು - shine

ಮಲ್ಲಿಗೆ - jasmine flower

ಸಂಪಿಗೆ - magnolica champaca, a flower

ಸೇವಂತಿ - chrysanthemum flower

ಗೊಂಬೆ/ಬೊಂಬೆ - doll

ಕಸವರ - Gold/wealth

ಚಿನ್ನ - Gold

ತೇರು - cart

ಜಾಜಿ - royal jasmine flower

ಇರುವಂತಿ - sambac jasmine flower

ಹನಿ - drop of water


ನಿಮಗೆ ತಿಳಿದಿರುವ ಅಚ್ಚುಕನ್ನಡದ ಹೆಸರನ್ನು ತಪ್ಪದೆ ಕಾಂಮೆಂಟ ಮಾಡಿ 

05 ಫೆಬ್ರವರಿ, 2024

ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ: ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು, ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವದಿಲ್ಲ

ಅಥಣ: ನಮ್ಮ ದೇಶವನ್ನ ಈ ಮೊದಲು ಇಂಗ್ಲೆಂಡಿನ ಪಾರ್ಲಿಮೆಂಟ್‌ನಲ್ಲಿ ಕುಳಿತು ಹಾವಾಡಿಗರ ದೇಶವೆಂದು ಮೂದಲಿಸುತ್ತಿದ್ದರು. ಈಗ ಅದೇ ದೇಶದ ಪ್ರಧಾನಿ ನಮ್ಮ ಭಾರತಿಯರು ಎನ್ನುವ ಹೆಮ್ಮೆ ನಮ್ಮೆದು ಭಾರತ ಬೆಳೆಗುತ್ತಿದೆ. ವಿಶ್ವಗುರುವಾಗುವತ್ತ ಧಾಪುಗಾಲು ಹಾಕಿದೆ ಇದಕ್ಕೆ ಕಾರಣ ನಮ್ಮ ಶಿಕ್ಷಣ, ಸಂಸ್ಕಾರ,ಸಂಸ್ಕೃತಿಯ ಆಧ್ಯಾತ್ಮದ ಗಟ್ಟಿಬೇರು ಎಂದು ಶೇಗುಣಿಸಿಯ ಶ್ರೀ ಮನ್.ನಿರಂಜನ.ಪ್ರನವ ಸ್ವರೂಪಿ ಡಾ.ಮಹಾಂತ ಪ್ರಭು ಸ್ವಾಮಿಜಿ ಹೇಳಿದರು. ಅವರು ರವಿವಾರ 4ರಂದು ಸಂಕೊನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಾ ನಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ಅಧಿಕವಾಗಿದೆ ಶಿಕ್ಷಣಕ್ಕೆ ಆದ್ಯತೆ ಹೆಚ್ಚಿನ ನೀಡಲಾಗಿದೆ ಅದರಂತೆ ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು ಆದರೆ ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವದಿಲ್ಲ ಅಹಿಂಸಾ ತತ್ವ ಇಟ್ಟುಕೊಂಡು ಚಿಂತನೆ ಮಾಡಿದವರು ಬುದ್ಧ, ಮಹಾವೀರ, ಬಸವಣ್ಣನವರು ಅವರ ಜೀವನ ಚರಿತ್ರೆಗಳನ್ನ ಮಕ್ಕಳಿಗೆ ತಿಳಿಪಡಿಸುವುದು ಅಗತ್ಯವಾಗಿದೆ ಅದಕ್ಕೆ ಮಹಾತ್ಮಾ ಗಾಂಧೀಜಿಯವರು ಕಂಡ ಕನಸು ಗ್ರಾಮಗಳು ರಾಮರಾಜ್ಯವಾಗಬೇಕು ಗ್ರಾಮೀಣ ಜನರ ಬದುಕು ಹಸನಾಗಬೇಕು ಅದಕ್ಕೆ ಸಾಕ್ಷಿಯಾಗಿ ಸಂಕೊನಟ್ಟಿಯಲ್ಲಿರುವ ವರ್ಧಮಾನ ಶಿಕ್ಷಣ ಸಂಸ್ಥೆ ಮಾದರಿಯಾಗಿ ಬೆಳೆದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಮುಂದೆ ಶತಮಾನೊತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.


ಕಾರ್ಯಕ್ರಮ ಉದ್ಘಾಟನೆಯ ದಿವ್ಯ ಸಾನಿಧ್ಯವಹಿಸಿದ ನಾಂದಣಿ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ ಮಾತನಾಡಿ ನಮ್ಮ ಬದುಕಿನಲ್ಲಿ ಮೂರು ಜನ ಗುರುಗಳು ಇರುತ್ತಾರೆ ಅವರನ್ನ ಮರೆಯಬಾರದು ಮೊದಲನೆಯವರು ತಂದೆ-ತಾಯಿ,ನಂತರ ಶಿಕ್ಷಕರು- ಶಾಲೆ. ಆಮೇಲೆ ಆಧ್ಯಾತ್ಮ ಸನ್ಮಾರ್ಗ ತೊರುವ ಗುರುಗಳು ಎಂದರು. ಅದೇ ರೀತಿ ಸಸಿಯಾಗಿ ಬೆಳೆದು ವ್ಯಕ್ತವಾಗಿ ನಿಂತಿರುವ ವರ್ಧಮಾನ ಶಿಕ್ಷಣ ಸಂಸ್ಥೆ ಅದರ ಹೆಸರಿನಲ್ಲಿ ಇದೆ ವೃದ್ಧಿ, ಬೆಳವಣಿಗೆ ಕಂಡು ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಿ ದೇಶಕ್ಕೆ ಕೀರ್ತಿ ತರುವ ಮಕ್ಕಳಾಗಲಿ ಈ ಸಂಸ್ಥೆ ಸುವರ್ಣಮಹೋತ್ಸವ ಕಾಣುವಂತಾಗಲಿ ಎಂದರು.

ಅಥಣಿ ಸಮೀಪದ ಸಂಕೊನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಭೂದಾನ ಮಾಡಿದ ದುಂಡವ್ವಾ ಪರಪ್ಪ ಅಸ್ತಿ ಅವರನ್ನ ಸತ್ಕರಿಸಿದ ಪೂಜ್ಯರ ದೃಶ್ಯ. ಈ ವೇಳೆ ನಾಂದಣಿ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ ಶೇಗುಣಿಸಿಯ ಡಾ.ಮಹಾಂತಪ್ರಭು ಸ್ವಾಮಿಜಿ,ಶ್ರವಣಬೆಳಗೊಳದ ಜಗದ್ಗುರು ಸ್ವಸ್ತಿಶ್ರೀ ಮದಭಿನವರ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾಚಾರ ಪಟ್ಟಾಚಾರ್ಯ ಸ್ವಾಮಿಜಿ ಮತ್ತಿತರರು ಇದ್ದರು.

ಒಳ್ಳೆಯ ನಾಗರಿಕನ್ನಾಗಿ ರೂಪಿಸುವ ಜವಾಬ್ದಾರಿಯಿದೆ ದುಶ್ಚಟಗಳಿಂದ ದೂರ ಮಾಡಿ ಅವರಿಗೆ ಮಾನವೀಯ ಮೌಲ್ಯಗಳನ್ನ ತಿಳಿಪಡಿಸುವುದು ಮೊಬೈಲದಿಂದ ದೂರವಿರುವಂತೆ ಎಚ್ಚರವಹಿಸುವುದು ಪಾಲಕರ ಕರ್ತವ್ಯವಾಗಿದೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ಎಚ್ಚರವಹಿಸಬೇಕು ಎಂದರು.



ಪ್ರಾಸ್ತಾವಿಕವಾಗಿ ವರ್ಧಮಾನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸಿದ್ದಪ್ಪ ನಾಗನೂರ ಮಾತನಾಡಿ ರಜತ ಮಹೋತ್ಸವ ಆಚರಣೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸುಂದರ ಮೈದಾನ ನಿರ್ಮಿಸಿ, ಧ್ವಜ ಕಟ್ಟೆ, ಬಡ ವಿದ್ಯಾರ್ಥಿಗಳಿಗೆ ನಿಧಿ ಸಂಗ್ರಹಣೆ ಮಾಡಿ ತಮ್ಮ ಪ್ರೀತಿಯನ್ನ ಶಾಲೆಗೆ ಸಮರ್ಪಿಸಿದ್ದಾರೆ ಎಲ್ಲರ ಸಹಾಯ, ಸಹಕಾರದಿಂದ ಇಂತಹ ಕಾರ್ಯಕ್ರಮವಾಗಲು ಸಾಧ್ಯವಾಗಿದೆ ಎಂದರು.


ಸಮಾರಂಭದಲ್ಲಿ ವಿವಿಧ ದಾನಿಗಳನ್ನ ಸತ್ಕರಿಸಿದರು ಈ ವೇಳೆ ಶ್ರವಣಬೆಳಗೊಳದೆ ಜಗದ್ಗುರು ಸ್ವಸ್ತಿಶ್ರೀ ಮದಭಿನವರ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾಚಾರ ಪಟ್ಟಾಚಾರ್ಯ ಸ್ವಾಮಿಜಿ.ಮಾಜಿ ಸಚಿವ ವೀರಕುಮಾರ ಪಾಟೀಲ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ದಡ್ಡಿ, ಕಾರ್ಯಾಧ್ಯಕ್ಷ ಶ್ರೀಕಾಂತ ಅಸ್ತಿ. ಕೃಷ್ಣಾ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಗಣ್ಯರಾದ ಅರುಣಕುಮಾರ ಯಲಗುದ್ರಿ, ಅಪ್ಪಾಸಾಬ ನಾಡಗೌಡ ಪಾಟಿಲ, ಎ.ಸಿ.ಪಾಟೀಲ, ರಾಜೇಂದ್ರ ಪಾಟೀಲ, ಎ.ಬಿ.ಬಸರಿಕೊಡಿ, ವೆಂಕಣ ಬಳೊಜ, ಶಿವಾನಂದ ದಿವಾನಮಳ, ಬಸಪ್ಪ ಗುಮಟಿ, ಬಾಬುರಾವ ಲಡಗಿ ಇದ್ದರು. 



23 ಡಿಸೆಂಬರ್, 2023

ರಜತ ಮಹೋತ್ಸವಕ್ಕೆ ಭರ್ಜರಿ ತಯಾರಿ.

1989ರಲ್ಲಿ ಕೇವಲ ಹತ್ತು ಜನ ಸೇರಿ ಅಥಣಿ ತಾಲೂಕಿನ ಸಂಕೋನಟ್ಟಿ ಮತ್ತು  ನಂದಗಾಂವದಲ್ಲಿ ನಿರ್ಮಾಣ ಆದ ಸಂಸ್ಥೆ ವರ್ಧಮಾನ ಶಿಕ್ಷಣ ಸಂಸ್ಥೆಯು 35ವರ್ಷಗಳನ್ನು ಪೂರೈಸಿದ್ದಕ್ಕೆ. ಈ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ಸೇರಿ ಬರುವ ವರ್ಷ 2024 ಫೆಬ್ರವರಿ ತಿಂಗಳ 9, ರಿಂದ 11ವರೆಗೆ  ರಜತ  ಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದು. ಇದರ ಪ್ರಯುಕ್ತ 1989 ರಿಂದ 2023ರ ವರೆಗೆ ಎಸ್ ಎಸ್ ಎಲ್ ಸಿ ಪಾಸಾಗಿರುವ ಎಲ್ಲಾ ಹಳೆಯ ವಿದ್ಯಾರ್ಥಿಗಳ ಇವತ್ತು ಶನಿವಾರ 12:00ಕ್ಕೆ ಸಂಕೋನಟ್ಟಿಯ ಹೈಸ್ಕೂಲ್ ಸಭಾಗೃಹದಲ್ಲಿ ಸಭೆ ಸೇರಿ ವಿವಿಧ ರೀತಿಯ ಚರ್ಚೆ ನಡೆಸಿದರು. 

ಈ  ಪೂರ್ವಭಾವಿ ಸಭೆಯಲ್ಲಿ  ಮುಖ್ಯೋಪಾಧ್ಯಾಯರಾದ ಲಡಗಿ   ಸರ್ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಅನಂತ್ ಬಸರಿಕೋಡಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ ಉಗಾರೆ ಈ ಪೂರ್ವಭಾವಿ  ಸಭೆಯಲ್ಲಿ ಉಪಸ್ಥಿತರಿದ್ದರು. ಇದರ ಜೊತೆಗೆ ಹಳೆಯ ವಿದ್ಯಾರ್ಥಿಗಳು ಮತ್ತು ಶಾಲೆಯ ಅಧ್ಯಾಪಕರು ಸೇರಿ ಮುಂಬರುವ ರಜತ ಮಹೋತ್ಸವ ಕಾರ್ಯಕ್ರಮವನ್ನು ಹೇಗೆ ಯಶಸ್ವಿಯಾಗಿ ಮಾಡಬೇಕು ಮುಖ್ಯೋಪಾಧ್ಯಾಯರಾದ ಲಡಗಿ ಸರ್   ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪೂರ್ವಭಾವಿ ಸಭೆಯಲ್ಲಿ   ಕಾರ್ಯಕ್ರಮ ಯಶಸ್ವಿಯಾಗಿಸಲು  ಚರ್ಚೆ ಮಾಡಿ ವಿವಿಧ ಆಯಾಮಗಳ ಬಗ್ಗೆ  ವಿಮರ್ಶೆ ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ 1989ರಿಂದ 2023ರ ವರೆಗೆ ವರ್ಧಮಾನ ಶಿಕ್ಷಣ  ಸಂಸ್ಥೆಯಲ್ಲಿ ಹತ್ತನೇ ತರಗತಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ತಪ್ಪದೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಸ್ಥೆಯ ಕಾರ್ಯದರ್ಶಿಯಾಗಿರುವ ಶ್ರೀ ಅನಂತ ಬಸರಿಕೋಡಿ ಅವರು ಪೂರ್ವಭಾವಿ ಸಭೆಯಲ್ಲಿ ನೆರೆದಿದ್ದ ಹಳೆಯ ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಂಡರು. 





ಹಳೆಯ ವಿದ್ಯಾರ್ಥಿಗಳ ಸಂಪರ್ಕಕ್ಕಾಗಿ ಸಂಸ್ಥೆಯಲ್ಲಿ ಹತ್ತನೇ ತರಗತಿ ತೇರ್ಗಡೆಯಾಗಿ ಅದೇ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಪಾಟೀಲ್ ಸರ್ ಅವರು ಇದರ ನೇತೃತ್ವವನ್ನು ವಹಿಸಿರುತ್ತಾರೆ ಮತ್ತು ಹಳೆಯ ವಿದ್ಯಾರ್ಥಿಗಳು ಅವರನ್ನು ಸಂಪರ್ಕಿಸಿ ಬೇಕು ಅವರ ದೂರವಾಣಿ ಸಂಖ್ಯೆ : 8123104279.

22 ನವೆಂಬರ್, 2023

ಬೇರೆ ಅಕೌಂಟ್ ಗೆ ಅಚಾನಕಾಗಿ ದುಡ್ಡು ಕಳಿಸಿದರೆ ಹಣವನು ಹಿಂಪಡೆಯುವುದು......!


ಬೇರೆ ಅಕೌಂಟ್ ಗೆ ಅಚಾನಕಾಗಿ ದುಡು ಕಳಿಸಿದರೆ ಹಣವನು ಹಿಂಪಡೆಯಲು, ಕೆಳಗಿನ ಹಂತಗಳನ್ನು ಅನುಸರಿಸಿ:

  1. ವ್ಯಕ್ತಿಗೆ ಸಂಪರ್ಕಿಸಿ. ಮೊದಲು, ನೀವು ಹಣ ಕಳಿಸಿದ ವ್ಯಕ್ತಿಗೆ ಸಂಪರ್ಕಿಸಿ ಮತ್ತು ನಿಮ್ಮ ತಪ್ಪು ತಿಳಿಸಿ. ಅವರು ನಿಮ್ಮ ಹಣವನ್ನು ಹಿಂಪಡೆಯಲು ಸಹಾಯ ಮಾಡಲು ಬಯಸುತ್ತಾರೆ ಎಂದು ಭಾವಿಸಲಾಗಿದೆ.
  2. ಬ್ಯಾಂಕ್ ಅನ್ನು ಸಂಪರ್ಕಿಸಿ. ವ್ಯಕ್ತಿಗೆ ಸಂಪರ್ಕಿಸಿದ ನಂತರ, ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ನಿಮ್ಮ ಬ್ಯಾಂಕ್ ನಿಮ್ಮ ಹಣವನ್ನು ಹಿಂಪಡೆಯಲು ಸಹಾಯ ಮಾಡಬಹುದು.
  3. ಹಣ ಪಾವತಿ ಮಾಡಲು ವ್ಯಕ್ತಿಯನ್ನು ಕೇಳಿ. ವ್ಯಕ್ತಿಯು ನಿಮ್ಮ ಹಣವನ್ನು ಹಿಂಪಡೆಯಲು ಬಯಸದಿದ್ದರೆ, ನೀವು ಅವರನ್ನು ಹಣವನ್ನು ಪಾವತಿ ಮಾಡಲು ಕೇಳಬಹುದು. ನೀವು ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಅವರಿಗೆ ತಿಳಿಸಬಹುದು.

ಬ್ಯಾಂಕ್ ಅನ್ನು ಸಂಪರ್ಕಿಸಿದಾಗ, ನೀವು ಈ ಕೆಳಗಿನ ಮಾಹಿತಿಯನ್ನು ಒದಗಿಸಬೇಕು:

  • ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ
  • ನೀವು ಹಣವನ್ನು ಕಳಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಯ ಸಂಖ್ಯೆ
  • ನೀವು ಕಳಿಸಿದ ಹಣದ ಮೊತ್ತ
  • ನೀವು ಹಣವನ್ನು ಕಳಿಸಿದ ದಿನಾಂಕ ಮತ್ತು ಸಮಯ

ಬ್ಯಾಂಕ್ ನಿಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂಬುದರ ಕುರಿತು ಯಾವುದೇ ಖಾತರಿಯಿಲ್ಲ. ಆದಾಗ್ಯೂ, ನೀವು ಈ ಹಂತಗಳನ್ನು ಅನುಸರಿಸುವುದರಿಂದ ನಿಮ್ಮ ಹಣವನ್ನು ಹಿಂಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಹಣ ಪಾವತಿ ಮಾಡಲು ವ್ಯಕ್ತಿಯನ್ನು ಕೇಳುವಾಗ, ನೀವು ಈ ಕೆಳಗಿನ ಮಾಹಿತಿಯನ್ನು ಒದಗಿಸಬೇಕು:

  • ನೀವು ಕಳಿಸಿದ ಹಣದ ಮೊತ್ತ
  • ನೀವು ಹಣವನ್ನು ಕಳಿಸಿದ ದಿನಾಂಕ ಮತ್ತು ಸಮಯ
  • ನೀವು ಹಣವನ್ನು ಕಳಿಸಿದ ಕಾರಣ

ವ್ಯಕ್ತಿಯು ನಿಮ್ಮ ಹಣವನ್ನು ಹಿಂಪಡೆಯಲು ಒಪ್ಪದಿದ್ದರೆ, ನೀವು ಕಾನೂನು ಕ್ರಮವನ್ನು ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ, ನೀವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಮತ್ತು ನಿಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ವಕೀಲರನ್ನು ನೇಮಿಸಿಕೊಳ್ಳಬೇಕಾಗುತ್ತದೆ.